ಉಡುಪಿ : ಅಕ್ಟೋಬರ್ 08:ದ್ರಶ್ಯ ನ್ಯೂಸ್ : ಧೂಮಕೇತು ನೋಡಲು ತವಕದಲ್ಲಿ ಇದ್ದೀರಾ..??ಹಾಗಾದರೆ ಈ ಬಾರಿ ಆರು ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದ ವಿಶ್ವದಲ್ಲಿಯೇ ಪವರ್ ಫುಲ್ ದೂರದರ್ಶಕ ಎಂದು ಆರು ದಾಖಲೆಗೆ ಭಾಜನರಾದ ಎಂಐಟಿಯ ಉದ್ಯೋಗಿ ಆರ್ ಮನೋಹರ್ ಅವರ ಆವಿಷ್ಕೃತ ದೂರದರ್ಶಕದ ಮೂಲಕ ಪಶ್ಚಿಮ ಭಾಗದಲ್ಲಿ ಶತಮಾನದಲ್ಲಿ ಕಂಡುಬರುವಂತಹ ಧೂಮಕೇತುವನ್ನು ನೋಡಲು ಅವಕಾಶ ಕಲ್ಪಿಸಲಾಗಿದೆ.
ಪರ್ಕಳದ ಪಾಟೀಲ್ ಕ್ಲೊತ್ ಸ್ಟೋರ್ ನಾ ಹಳೆ ಕಟ್ಟಡದ ಮೂರನೇ ಮಾಳಿಗೆಯಮೇಲೆ ಮತ್ತು ಕೆಳ ಭಾಗದಲ್ಲಿ ಧೂಮಕೇತು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಖಗೋಳ ಆಸಕ್ತರು ಅಕ್ಟೋಬರ್ 12 ಶನಿವಾರ ಸಂಜೆ 6:30 ಯಿಂದ. 7:30ರ ತನಕ. ನೋಡಲು ಅವಕಾಶ ಕಲ್ಪಿಸಲಾಗಿದೆ ಜೊತೆಗೆ ದೂರದ ಊರಿನಿಂದ ವೀಕ್ಷಿಸಲು ಬರುವವರೆಗೆ ಮೊದಲ ಅವಕಾಶನೀಡಲಾಗುವುದು ಎಂದು ಕಾರ್ಯಕ್ರಮ ಸಂಘಟಕ ಗಣೇಶ್ ರಾಜ್ ಸರಳೆಬೆಟ್ಟು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9845690278 ಕರೆ ಮಾಡಿ. ರಿಜಿಸ್ಟರ್ ಮಾಡಿಕೊಳ್ಳುವಂತೆ ಸಂಘಟಕರು ತಿಳಿಸಿದ್ದಾರೆ