ಉಡುಪಿ :ಅಕ್ಟೋಬರ್ 07: ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಲಲಿತಾ ಪಂಚಮಿಯ ಪರ್ವಕಾಲದಲ್ಲಿ ಜೋಡಿ ಲಲಿತಾ ಸಹಸ್ರ ಕದಳಿಯಾಗ ಸಂಪನ್ನಗೊಂಡಿತು..
ದಕ್ಷಿಣ ಭಾರತದಲ್ಲಿ ಅತಿ ಎತ್ತರವಾದ ಮೇರು ಶ್ರೀ ಚಕ್ರವನ್ನು ಹೊಂದಿರುವ ಶ್ರೀ ಕ್ಷೇತ್ರದಲ್ಲಿ ಶ್ರೀ ಚಕ್ರಪಿಟಾರೂಢಳಾದ ರಾಜರಾಜೇಶ್ವರಿಗೆ ಸಲ್ಲಿಕೆಯಾಗುವ ಮಹಾನ್ ಯಾಗವೇ ಲಲಿತ ಸಹಸ್ರ ಕದಳಿಯಾಗ…
ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕದಳಿಹಣ್ಣನ್ನು ತ್ರಿಮದುರಯುಕ್ತವಾಗಿ ಹೋಮಿಸಿ ಶ್ರೀ ಲಲಿತಾಂಬಿಕೆಯನ್ ಸಹಸ್ರನಾಮಗಳಿಂದ ಸ್ತುತಿಸಿ ವಿಧವಿಧ ಕುಸುಮಗಳಿಂದ ಅರ್ಜಿಸಿ ಬಗೆ ಬಗೆಯ ಆರತಿಯನ್ನು ಬೆಳಗಿ ಆಕೆಯ ಅನುಗ್ರಹವನ್ನು ಯಾಚಿಸಲಾಗುತ್ತದೆ.
ಕ್ಷೇತ್ರದ ಗುರುಗಳಾದ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಅವರ ಮಾರ್ಗದರ್ಶನ ದಿಂದ ಕ್ಷೇಮಗೊಂಡ ಎರಡು ಕುಟುಂಬಗಳು ಪೂರ್ವಕವಾಗಿ ಈ ಸೇವೆಯನ್ನು ಸಮರ್ಪಿಸಿ ದೋಷ ಮುಕ್ತರಾಗಿ ನೆಮ್ಮದಿಯ ಜೀವನವನ್ನು ನಡೆಸುವಂತಾಗಿದೆ..
ಇಹದಲ್ಲಿ ಭೋಗ ಪರದಲ್ಲಿ ಸುಖ ನೆಮ್ಮದಿ ಅನುಗ್ರಹಿಸುವ ಈ ಯಾಗ ಶ್ರೀ ಕ್ಷೇತ್ರದಲ್ಲಿ ನಿರಂತರವಾಗಿ ನೆರವೇರುತ್ತಿದೆ…
ಯಾಗದ ಅಂಗವಾಗಿ ಬ್ರಾಹ್ಮಣ ಸುವಾಸಿನಿ ಕನ್ನಿಕರಾದನೆಗಳು ನೆರವೇರಿತು.
ಮಧ್ಯಾಹ್ನದ ಮೃಷ್ಟಾನ್ನ ಸಂತರ್ಪಣೆಯಲ್ಲಿ ಲಲಿತಾಂಬಿಕೆಗೆ ಪ್ರಿಯವಾದ ಹಾಲು ಪಾಯಸ ರಂಭಾ ಪಾಕ ಷಡ್ ರಸಾನದಲ್ಲಿ ಶ್ರೇಷ್ಠವಾದ ಅತಿರಸ ಭಕ್ತರಿಗೆ ಉಣಬಡಿಸಲಾಯಿತು…
ದುರ್ಗಾ ಆದಿಶಕ್ತಿ ದೇವಿಯನ್ನು ಕಬ್ಬಿನ ಜಲ್ಲೆಗಳ ಮಧ್ಯೆ ಕಬ್ಬನ್ನು ಹಿಡಿದು ಕನ್ನೆಕೆಯಾಗಿ ವಿರಾಜಮಾನಾಳಾದಂತೆ ಕ್ಷೇತ್ರದ ಅಲಂಕಾರ ತಜ್ಞ ಆನಂದ ಬಾಯರಿ ಅವರು ಅಲಂಕರಿಸಿದ್ದರು..
ಪಂಚವರ್ನಾತ್ಮಕವಾದ ಮಂಡಲದಲ್ಲಿ ಒಂದರಲ್ಲಿ ಲಲಿತಾಂಬಿಕೆ ಇನ್ನೊಂದರಲ್ಲಿ ಕಂದ ಮಾತೆಯನ್ನು ರಚಿಸಲಾಗಿತ್ತು…
ಈ ಯಾಗವನ್ನು ವೀಕ್ಷಿಸಲು ಭಕ್ತ ಸಮೂಹ ಅಪಾರ ಸಂಖ್ಯೆಯಲ್ಲಿ ನೆರೆದಿತ್ತು..
ಯಾಗದ ಪೂರ್ಣಹುತಿ ಪಂಚನಾದಗಳ ಮಧ್ಯೆ ವೇದ ಗೋಶಗಳೊಂದಿಗೆ ನೆರವೇರಿತು..
ಗತಕಾಲದ ಕ್ಷೇತ್ರ ಪರಂಪರೆ ಮತ್ತೆ ಮರುಕಳಿಸುವಂತೆ ಕ್ಷೇತ್ರದಲ್ಲಿ ಯಜ್ಞ ಯಾಗಾದಿಗಳು ಶಿಸ್ತು ಬದ್ಧವಾಗಿ ಶಾಸ್ತ್ರ ಬದ್ಧವಾಗಿ ಸಂಪನ್ನಗೊಂಡು ಸಮರ್ಪಿಸಿದ ಯಜಮಾನವರ್ಗಕ್ಕೂ ನೋಡಿದ ಭಕ್ತರವರ್ಗಕ್ಕೂ ಕ್ಷೇಮ ದೊರಕುತ್ತಿದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ..
ಕಡಿಯಳಿ ಮಾತೃ ಮಂಡಳಿ ಬಜಕರಿಂದ ಭಜನೆ ಸಂಕೀರ್ತನೆ, ಅಭಿರಾಮಧಾಮ ಗುಂಡಿಬೈಲಿ ಇವರಿಂದ ನೃತ್ಯ ಸಿಂಚನ, ಸ್ಥಳೀಯ ಕಲಾವಿದರಿಂದ ವೈವಿಧ್ಯಮಯ ಕಾರ್ಯಕ್ರಮಗಳು ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಸಂಪನ್ನಗೊಂಡವು..
ಸಂಜೆ ರಂಗ ಪೂಜೆ ಹಾಗೂ ದುರ್ಗಾ ನಮಸ್ಕಾರ ಪೂಜೆ ಉದ್ಯಾವರ ದಿನೇಶ್ ಮತ್ತು ರತ್ನ ದಿನೇಶ್ ದಂಪತಿಗಳಿಂದ ಕ್ಷೇತ್ರಕ್ಕೆ ಸಮರ್ಪಿತವಾಯಿತು