ಹೆಬ್ರಿ :ಅಕ್ಟೋಬರ್ 07: ಮುದ್ರಾಡಿ ಬಲ್ಲಾಡಿ ಪರಿಸರದಲ್ಲಿ ಪ್ರವಾಹಕ್ಕೆ ಕೊಚ್ಚಿಹೋದ ವೃದ್ಧೆಯ ಮೃತದೇಹ ಇಂದು ಸೋಮವಾರ ಪತ್ತೆಯಾಗಿದೆ.
ನೇರಲ್ಪಕ್ಕೆ ನಿವಾಸಿ 85 ವರ್ಷ ಪ್ರಾಯದ ಚಂದ್ರ ಗೌಡ್ತಿ ಮನೆಯ ಶೌಚಾಲಯಕ್ಕೆ ಹೋದವರು ನಾಪತ್ತೆಯಾಗಿದ್ದರು.
ಪ್ರವಾಹಕ್ಕೆ ಕೊಚ್ಚಿ ಹೋಗಿರುವುದೇ ಎಂಬ ಸಂಶಯ ಮೂಡಿದ್ದು ಸೋಮವಾರ ಹುಡುಕಾಡಿದಾಗ ಮನೆಯಿಂದ ಸುಮಾರು ದೂರದ ಗದ್ದೆಯಲ್ಲಿ ಮೃತ ದೇಹ ಪತ್ತೆಯಾಗಿದೆ.