ಅಕ್ಟೋಬರ್ 07:ಕಾರ್ಕಳ ತಾಲೂಕಿನ ಕಾಂತಾವರದ ಪ್ರಕೃತಿ ಶಿಕ್ಷಣ ಸಂಸ್ಥೆಯ 2024-25 ನೇ ಶೈಕ್ಷಣಿಕ ಸಾಲಿನ ಪೋಷಕ ಶಿಕ್ಷಕ ಸಭೆ ಶಾಲೆಯ ಸಭಾಂಗಣದಲ್ಲಿ ದಿನಾಂಕ 03-10-2024 ರಂದು ಶಿಕ್ಷಕ ಪೋಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ರೂಪ ಭಂಡಾರಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಗೆ ಬಂದಂತಹ ಅತಿಥಿ ಅಭ್ಯಾಗತರನ್ನು ಸ್ವಾಗತಿಸುವ ಮೂಲಕ ಸಭಾ ಕಾರ್ಯಕ್ರಮ ಪ್ರಾರಂಭವಾಯಿತು.
ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ಪ್ರಕಾಶ್ ರಾವ್ ಅವರು ಸಭೆಯ ಉದ್ದೇಶವನ್ನು ತಿಳಿಸಿದರು.
ನ೦ತರ ಎಲ್ಲ ಪೋಷಕರು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಪೋಷಕರ ಅಭಿಪ್ರಾಯಗಳನ್ನು ಆಲಿಸಿದ ಸಂಸ್ಥೆಯ ಆಡಳಿತ ನಿರ್ದೇಶಕರಾದ ಶ್ರೀಯುತ ಫಿಲಿಪ್ ಡಿಸಿಲ್ವ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಸಂಸ್ಥೆಯ ಆಡಳಿತ ಅಧಿಕಾರಿ ಶ್ರೀಯುತ ಮಧುಸೂದನ್ ಶಿಂಧೆ ಭಾಗವಹಿಸಿದ್ದರು.
ಸಂಸ್ಥೆಯ ಶಿಕ್ಷಕಿ ಶುಭಾಶಿನಿ ಸ್ವಾಗತಿಸಿದರು, ಶಿಕ್ಷಕಿ ರೊನಕ್ ಅರಾ ವಂದಿಸಿದರು, ಶಿಕ್ಷಕರಾದ ಜಯಂತ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಲಘು ಉಪಾಹಾರದ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿರುತ್ತದೆ.