ಕಾರ್ಕಳ: ಸೇವೆ ಎಂದರೆ ಆತ್ಮ ತೃಪ್ತಿಗಾಗಿ ಮಾಡುವ ಕೆಲಸ. ಇದು ವ್ಯಕ್ತಿತ್ವವನ್ನು ಬೆಳಗಿಸುತ್ತದೆ ಹಾಗೂ ಸೇವೆಯಿಂದ ಅಹಂಕಾರ ದೂರವಾಗುತ್ತದೆ ಎಂದು ಲಯನ್ಸ್ ಕ್ಲಬ್, ಲಕ್ಷ್ಯ, ಉಡುಪಿ ಇದರ ಅಧ್ಯಕ್ಷರಾದ ಶ್ರೀರಘುನಾಥ್ ನಾಯಕ್ ಅವರು ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವನ್ನು ಉದ್ಘಾಟಿಸಿ ಹೇಳಿದರು.
ಯುವಜನತೆ ಬುದ್ಧಿ, ಏಕಾಗ್ರತೆಯನ್ನು ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಸರಿ -ತಪ್ಪು ಅರಿತು ಬಾಳಬೇಕು. ಸಾಮಾಜಿಕ ಪಿಡುಗುಗಳನ್ನು ಮೀರಿ ಹೊರಬರುವಷ್ಟು ಸದೃಢರಾಗಬೇಕು. ಕನಸುಗಳನ್ನು ನನಸಾಗಿಸಲು ಪ್ರಯತ್ನ ಪಡಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಉಷಾನಾಯಕ್ ಅವರು ಮಾತನಾಡುತ್ತಾ ಯುವಜನತೆ ಪರಿಪೂರ್ಣತೆ ಹೊಂದಲು ಆತ್ಮವಿಶ್ವಾಸ, ಸಮಯ ಪರಿಪಾಲನೆ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಎನ್ಎಸ್ಎಸ್ ಘಟಕದಿಂದ ಸಾಕಷ್ಟು ಪರಿಸರ ಜಾಗೃತಿ ಕಾರ್ಯಕ್ರಮಗಳು ನಡೆಯಲಿ. ಎನ್ಎಸ್ಎಸ್ ಎಂದರೆ ನಿಸ್ವಾರ್ಥ ಭಾವದಿಂದ ಮಾಡುವ ಸಮುದಾಯ ಸೇವೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಘಟಕದ ನಾಯಕಿಯರಾದ ಅನನ್ಯ, ಅಮೂಲ್ಯ ಹಾಗೂ ನಯನ ಉಪಸ್ಥಿತರಿದ್ದರು. ಎನ್ಎಸ್ಎಸ್ ಯೋಜನಾಧಿಕಾರಿ ಅನ್ವಿತಾ ಮಲ್ಯ ಅತಿಥಿಗಳ ಪರಿಚಯ ನೀಡಿ ಎಲ್ಲರನ್ನೂ ಸ್ವಾಗತಿಸಿದರು. ಲಾವಣ್ಯ ವಂದಿಸಿದರು. ಸ್ನೇಹ ಕಾರ್ಯಕ್ರಮ ನಿರೂಪಿಸಿದರು.