ಉಡುಪಿ :ಅಕ್ಟೋಬರ್ 04:ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆ ಉಡುಪಿ ಜಿಲ್ಲೆ ಇವರ ನೇತೃತ್ವದಲ್ಲಿ ಸಮಾಜದ ದಾನಿಗಳ ಸಹಕಾರದಿಂದ ಜಿಎಸ್ಬಿ ಸೇವಾ ಸಂಘ ಸಾಹೇಬರಕಟ್ಟೆ ಶಿರಿಯಾರ ಪರಿಸರದ ಆರ್ಥಿಕವಾಗಿ ಹಿಂದುಳಿದ ಶ್ರೀ ನಾಗೇಶ ಪ್ರಭು ಕಾಜರಳ್ಳಿ ಯವರಿಗೆ ಕಟ್ಟಿಸಿ ಕೊಡುತ್ತಿರುವ ನೂತನ ಮನೆಯ ಭೂಮಿ ಪೂಜನ ಕಾರ್ಯಕ್ರಮವು ನವರಾತ್ರಿಯ ಪ್ರಥಮ ದಿನ ಅಕ್ಟೋಬರ್ 3 ಗುರುವಾರ 2024 ಪರ್ವಕಾಲದಲ್ಲಿ ಪ್ರಾತಃಕಾಲ 6:30 ಗಂಟೆಗೆ ಸಂಪನ್ನಗೊಂಡ ಈ ಕಾರ್ಯಕ್ರಮದಲ್ಲಿ ಬಸ್ರೂರು ಶ್ರೀ ಗೋಕರ್ಣ ಮಠದ ಪುರೋಹಿತರಾದ ವೇದಮೂರ್ತಿ ಶ್ರೀ ಮಹೇಶ್ ಭಟ್ ರವರು ಭೂಮಿ ಪೂಜೆ ಶಿಲಾನ್ಯಾಸ ದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಜಿಎಸ್‌ಬಿ ಸ ಮಾಜ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀ ಜಿ.ಸತೀಶ್ ಹೆಗಡೆ ಕೋಟ ,ಸಂಚಾಲಕರಾದ ಶ್ರೀಆರ್.ವಿವೇಕಾನಂದ ಶೆಣೈ ,ಕಾರ್ಕಳ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀ ಸಾಣೂರು ನರಸಿಂಹ ಕಾಮತ್ ರವರು ಉಪಸ್ಥಿತರಿದ್ದು ಮಾಹಿತಿ_ ಮಾರ್ಗದರ್ಶನ ನೀಡಿದರು.
ಸಾಹೇಬರ ಕಟ್ಟೆ ಸಿರಿಯಾರ _ಜಿ ಎಸ್ ಬಿ ಸೇವಾ ಸಂಘದ ಪ್ರಮುಖರುಗಳಾದ ಶ್ರೀ ಮಧುವನ ಮಾಧವ ಹೆಗಡೆ, ಶ್ರೀ ಅಶೋಕ ಪ್ರಭು, ಶ್ರೀ ಮಧುವನ ಗಣೇಶ್ ನಾಯಕ್, ಶ್ರೀ ರವೀಂದ್ರನಾಥ ಕಿಣಿ, ಶ್ರೀ ಮಹೇಶ ಶೆಣೈ ಗಾವಳಿ, ಶ್ರೀ ರವಿಪ್ರಕಾಶ ಪ್ರಭು ಗಾವಳಿ, ಶ್ರೀ ವಿಶ್ವನಾಥ ಶಾನ್ ಬಾಗ್, ಶ್ರೀ ಶಿವಾನಂದ ಶಾನುಭಾಗ್, ಶ್ರೀ ಕೃಷ್ಣಮೂರ್ತಿ ಕಾಮತ್ ಎಡ್ತಾಡಿ, ಶ್ರೀ ನಿತ್ಯಾನಂದ ಪೈ ಕಾಜರಳ್ಳಿ, ಶ್ರೀ ಸುಭಾಷ್ ಪ್ರಭು ಕಾಜರಹಳ್ಳಿ, ಶ್ರೀ ಸುರೇಶ್ ಮಲ್ಯ, ಸಾಹೇಬರಕಟ್ಟೆ, ಶ್ರೀಮತಿ ಪ್ರಮೀಳಾ ಪ್ರಭು , ಶ್ರೀಮತಿ ಯಶೋದ ಮಲ್ಯ, ಶ್ರೀಮತಿ ಕಾವ್ಯ ಹೆಗಡೆ, ಶ್ರೀಮತಿ ಚಂದ್ರಕಲಾ ಪೈ, ಶ್ರೀಮತಿ ಸವಿತಾ ಪ್ರಭು, ಶ್ರೀಮತಿ ವಿದ್ಯಾ ಶಾನುಭಾಗ್, ಶ್ರೀ ಸಂಪತ್ ನಾಯಕ್ಪಿ. ವಿದ್ಯಾನಂದ ಶರ್ಮ ಕಾರ್ಕಳ, ಸಿದ್ದಾಪುರ ವಾಸುದೇವ ಪೈ ಉಡುಪಿ, ದಾನಿಗಳಾದ ಶ್ರೀ ರಾಧಾಕೃಷ್ಣ ನಾಯಕ್ ಕೋಟ, ಶ್ರೀಮತಿ ವೈಜಯಂತಿ ಕಾಮತ್, ಶ್ರೀ ಅನಂತ ಪೈ ಹಾಗೂ ಶ್ರೀಮತಿ ಕಲ್ಪನಾ ಅನಂತಪೈ ಉಪಸ್ಥಿತರಿದ್ದು ಅತಿ ಶೀಘ್ರದಲ್ಲೇ ಈ ಮನೆಯು ಸುಸಂಪನ್ನಗೊಳ್ಳಬೇಕೆಂದು ( ಜನವರಿ 17 2025 ರ ಶುಭ ಮುಹೂರ್ತವನ್ನು ಶ್ರೀ ರಾಧಾಕೃಷ್ಣ ನಾಯಕ್ ಕೋಟ ರವರು ಸೂಚಿಸಿದರು)ಶುಭ ಹಾರೈಸಿದರು.
ಗ್ರಹ ನಿರ್ಮಾಣ ಕಾರ್ಯಕ್ಕೆ ಸರ್ಕಾರದಿಂದ ಉಚಿತ ನಿವೇಶನವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿ, ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸುತ್ತಿರುವ ಸ್ಥಳೀಯ ಸಾಮಾಜಿಕ ಮುಂದಾಳುಗಳಾದ ಶ್ರೀ ಪ್ರದೀಪ್ ಬಲ್ಲಾಳರವರನ್ನು ಜಿಎಸ್ ಬಿ ಸಮಾಜದ ವತಿಯಿಂದ ಗೌರವಿಸಲಾಯಿತು.
ಅಕ್ಟೋಬರ್ 3 ಗುರುವಾರ 2024 ಗ್ರಹ ನಿರ್ಮಾಣದ ಭೂಮಿ ಪೂಜೆಯ ದಿನದಿಂದ ಮುಂದಿನ 92 ದಿನಗಳ ಒಳಗಾಗಿ(ಜನವರಿ 17 _ 2025)ದಾಖಲೆ ಅವಧಿಯಲ್ಲಿ ಸುಮಾರು 12 ಲಕ್ಷಗಳ ಅಂದಾಜು ವೆಚ್ಚದಲ್ಲಿ ಗ್ರಹ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವಲ್ಲಿ ಸಮಾಜ ಬಾಂಧವರ, ಹಿತೈಷಿ ದಾನಿಗಳ ಸಂಪೂರ್ಣ ಸಹಕಾರವನ್ನು ನಿರೀಕ್ಷಿಸಲಾಗಿದೆ ಎಂದು ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಶ್ರೀ ಆರ್. ವಿವೇಕಾನಂದ ಶೆಣೈ, ಗ್ರಹ ನಿರ್ಮಾಣ ಯೋಜನೆಯನೇತೃತ್ವವನ್ನು ವಹಿಸಿರುವ ಶ್ರೀ ಮಧುವನ ಮಾಧವ ಹೆಗಡೆ ಮತ್ತು ಶ್ರೀ ಅಶೋಕ್ ಪ್ರಭು ಸಾಹೇಬರಕಟ್ಟೆ ಶಿರಿಯಾರರವರು ತಿಳಿಸಿರುತ್ತಾರೆ.