ಉಡುಪಿ :ಅಕ್ಟೋಬರ್ 01:ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಆಡಳಿತ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಯವರ ನೇತೃತ್ವದಲ್ಲಿ ದಿನಾಂಕ . 03-10-2024ನೇ ಗುರುವಾರದಿಂದ ಮೊದಲ್ಗೊಂಡು ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿಯ ಸನ್ನಿಧಾನದಲ್ಲಿ ಶರನ್ನವರಾತ್ರಿ ಮಹೋತ್ಸವವು ದಿನಂಪ್ರತಿ ಊರ ಹಾಗೂ ಪರವೂರ ಭಕ್ತರ ಸೇವಾರೂಪದ ಶ್ರೀ ಚಂಡಿಕಾಯಾಗ, ಸಹಸ್ರ ನಾಮಾರ್ಚನೆ, ಕಲ್ಲೋಕ್ತ ಪೂಜೆ, ಶ್ರೀರಂಗಪೂಜೆ, ಶ್ರೀ ದುರ್ಗಾನಮಸ್ಕಾರ ಪೂಜೆ, ದೀಪಾರಾಧನೆ ಹಾಗೂ ನಿರಂತರ ಅನ್ನಸಂತರ್ಪಣೆಯೊಂದಿಗೆ ಶರನ್ನವರಾತ್ರಿ ನಡೆಯಲಿದೆ.
ತಾ. 05.10.2024ನೇ ಶನಿವಾರ ಶ್ರೀ ಕುಬೇರ ಚಿತ್ರಲೇಖ ಸಹಿತ ಮಹಾಲಕ್ಷ್ಮಿಯ ಸಾನಿಧ್ಯದಲ್ಲಿ ಲಕ್ಷ್ಮೀ ಸಹಸ್ರನಾಮ ಪಾಯಸ ಹೋಮ
ತಾ. 07.10.2024ನೇ ಸೋಮವಾರ ಶ್ರೀ ಲಲಿತಾ ಪಂಚಮಿಯ ಪರ್ವಕಾಲದಲ್ಲಿ ಶ್ರೀ ಲಲಿತಾ ಸಹಸ್ರ ಕದಳೀ ಯಾಗ
ತಾ. 11.10.2024ನೇ ಶುಕ್ರವಾರ ಶ್ರೀ ಗಾಯತ್ರಿ ಮಂತ್ರ ಮಹಾಯಾಗ
ತಾ. 12.10.2024ನೇ ಶನಿವಾರ ವಿಜಯ ದಶಮಿಯ ಪರ್ವಕಾಲದಲ್ಲಿ ಶ್ರೀಕ್ಷೇತ್ರದ ವತಿಯಿಂದ ಶ್ರೀ ದುರ್ಗಾ ಆದಿಶಕ್ತಿ ಸಂಪ್ರೀತಯೇ ತ್ರಿಲೋಕೇಶ್ವರಿ ಮಹಾ ಯಾಗ, ಶ್ರೀ ರಂಗಪೂಜಾ ಮಹೋತ್ಸವ ಸಹಿತ ಬಲಿ ಉತ್ಸವವು ನಿರಂತರ ಅನ್ನಸಂತರ್ಪಣೆಯೊಂದಿಗೆ ಜರಗಲಿರುವುದು.
ಈ ಪ್ರಯುಕ್ತ ನಡೆಯಲಿರುವ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತರೆಲ್ಲರೂ ಚಿತ್ತೈಸಿ, ಶ್ರೀ ದುರ್ಗಾ ಆದಿಶಕ್ತಿಯ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಕ್ಷೇತ್ರದ ಧರ್ಮಾಧಿಕಾರಿಗಳು ಶ್ರೀ ಶ್ರೀ ರಮಾನಂದ ಗುರೂಜೀ ವಿನಂತಿಸಿಕೊಂಡಿದ್ದಾರೆ
ವಿ. ಸೂ. : ತಾ. 03-10-2024ರ ಗುರುವಾರ ಬೆಳಿಗ್ಗೆ ಗಂಟೆ 6.30ರಿಂದ ಕದಿರು ಕಟ್ಟುವಿಕೆಯಿಂದ ನವರಾತ್ರಿ ಶುಭಾರಂಭಗೊಳ್ಳಲಿದೆ.
ತಾ. 09-10-2024ನೇ ಪಷ್ಠಿ ತಿಥಿ ಬುಧವಾರದಿಂದ ತಾ. 11-10-2024ನೇ ನವಮಿ ತಿಥಿ ಶುಕ್ರವಾರದವರೆಗೆ ಅಕ್ಷರಾಭ್ಯಾಸ/ತುಲಾಭಾರ ಸೇವೆ ನಡೆಯಲಿದೆ. ಕ್ಷೇತ್ರಕ್ಕೆ ಹೊರೆ ಕಾಣಿಕೆ ಕಳುಹಿಸುವವರು, ತುಲಾಭಾರ ಸೇವೆ ನೀಡುವವರು, ಮಕ್ಕಳಿಗೆ ವಿದ್ಯಾರಂಭ ಮಾಡಿಸುವವರು ಹಾಗೂ ಕ್ಷೇತ್ರದ ವಿಶೇಷ ಸೇವಯಾದ “ನೃತ್ಯಸೇವೆ” ನೀಡಲಿಚ್ಛಿಸುವ ನೃತ್ಯಾರ್ಥಿಗಳು ಕ್ಷೇತ್ರದ ಉಸ್ತುವಾರಿ ಶ್ರೀಮತಿ ಕುಸುಮಾ ನಾಗರಾಜ ಆಚಾರ್ಯ 9342749650/6360459569, 6362408747) ಅವರನ್ನು ಸಂಪರ್ಕಿಸಬಹುದು