ಉಡುಪಿ: ಸೆಪ್ಟೆಂಬರ್ 30:ಭಾರತದ ಸಂವಿಧಾನಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ವೈಚಾರಿಕ ಚಿಂತನೆಗಳು ದಲಿತರು, ಮಹಿಳೆಯರ ಸಹಿತ ಎಲ್ಲಾ ಶೋಷಿತ ಸಮುದಾಯಗಳ ವಿಮೋಚನೆಗೆ ದಿವೌಷಧ ಎಂದು ದಲಿತ ಹಕ್ಕುಗಳ ಸಮಿತಿ (ಡಿ ಎಚ್೯ ಎಸ್)ಯ ಉಡುಪಿ ಜಿಲ್ಲಾ ಸಂಚಾಲಕ ಸಂಜೀವ ಬಳ್ಳೂರು ಅವರು ಹೇಳಿದರು.
ಕುಂದಾಪುರದ ಕಾರ್ಮಿಕ ಭವನದಲ್ಲಿ ಸೆಪ್ಟೆಂಬರ್ 29ರಂದು ನಡೆದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಬಳ್ಳೂರು ಅವರು ಮಾತನಾಡುತ್ತಿದ್ದರು.
ಜನಪರ ಹೋರಾಟಗಾರರು. ಪತ್ರಕರ್ತರಾದ ಶ್ರೀರಾಮ ದಿವಾಣ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಮಿಕ ಮುಖಂಡರಾದ ಬಾಲಕೃಷ್ಣ ಶೆಟ್ಟಿ ಹಾಗೂ ಡಿ ಎಚ್ ಎಸ್ ರಾಜ್ಯ ಕಾರ್ಯದರ್ಶಿ ಎನ್. ರಾಜಣ್ಣ ಉಪನ್ಯಾಸ ನೀಡಿದರು. ನಾಗರತ್ನಾ ನಾಡ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆಯ ಪ್ರತಿಜ್ಞಾವಿಧಿ ನೆರವೇರಿಸಲಾಯಿತು.
ಹಿರಿಯ ಕಾರ್ಮಿಕ ಮುಖಂಡರಾದ ಕೆ. ಶಂಕರ್, ಎಚ್. ನರಸಿಂಹ, ರಾಜೀವ ಪಡುಕೋಣೆ. ರಾಮ ಕಾರ್ಕಡ, ಶಾರದ ಮುಂತಾದವರು ಉಪಸ್ಥಿತರಿದ್ದರು. ಡಿ. ಎಚ್. ಎಸ್. ಜಿಲ್ಲಾ ಸಹ ಸಂಚಾಲಕ ರವಿ.ವಿ.ಎಂ ಪ್ರಾಸ್ತಾವಿಕ ಭಾಷಣ ಮಾಡಿದರು. ನಾಗರತ್ನಾ ಆರ್. ಸ್ವಾಗತಿಸಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.