ಉಡುಪಿ:ಸೆಪ್ಟೆಂಬರ್ 30:ವಿಶ್ವ ಹೃದಯ ದಿನಾಚರಣೆ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಮತ್ತು ರೋಟರಾಕ್ಟ್ ಕ್ಲಬ್ ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ ವತಿಯಿಂದ ಡಾ ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಸಹಯೋಗದಲ್ಲಿ ವಿಶ್ವ ದಿನಾಚರಣೆಯ ಅಂಗವಾಗಿ “ಹೃದಯಕ್ಕಾಗಿ ನಡಿಗೆ” ಕಾರ್ಯಕ್ರಮವನ್ನು ದಿನಾಂಕ 29.09.24 ಭಾನುವಾರ ಅಯೋಜಿಸಲಾಯ್ತು.
ಕಾರ್ಕಳದ ಖ್ಯಾತ ಲೆಕ್ಕಪರಿಶೋಧಕರು, ದಾನಿಗಳು ಆಗಿರುವ ಕೆ ಕಮಲಾಕ್ಷ ಕಾಮತ್ ಇವರು ಕಾರ್ಕಳ ಅನಂತಶಯನದ ವ್ರತ್ತದ ಹತ್ತಿರ “ಹೃದಯಕ್ಕಾಗಿ ನಡಿಗೆ” ಕಾರ್ಯಕ್ರಮಕ್ಕೆ ಚಾಲನೆಯನ್ನ ನೀಡಿದರು. ನಡಿಗೆಯು ಕಾರ್ಕಳ ಮುಖ್ಯ ರಸ್ತೆಯಲ್ಲಿ ಸಾಗಿ ಡಾ ಟಿಎಂಎ ಪೈ ರೋಟರಿ ಆಸ್ಪತ್ರೆ ಹತ್ತಿರ ಸಂಪನ್ನಗೊಂಡಿತು.
ಕಾರ್ಕಳ ಪರಿಸರದ ಕಾಲೇಜು ವಿದ್ಯಾರ್ಥಿಗಳು, ವಿವಿಧ ಇಲಾಖೆಯಿಂದ ನೌಕರ ಭಾಂದವರು, ವಿವಿಧ ಸಂಘ ಸಂಸ್ಥೆಗಳು ಜಾತಾದಲ್ಲಿ ಭಾಗವಹಿಸಿದ್ದವು. ಕಾಲೇಜು ವಿದ್ಯಾರ್ಥಿಗಳಿಗೆ ಕಿರು ಪ್ರಹಸನದ ಸ್ಪರ್ಧೆ ಏರ್ಪಾಡಿಸಲಾಗಿತ್ತು.
ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಮ್ಮ ಜಿಲ್ಲೆಯ ಖ್ಯಾತ ಹೃದ್ರೋಗ ತಜ್ನ ಡಾ.ಪದ್ಮನಾಭ ಕಾಮತ್, ಕೆಎಂಸಿ, ಮಂಗಳೂರು ಇವರು ಭಾಗವಹಿಸಿ ದೀಪ ಬೆಳಗಿಸಿ ಮಾತಾಡಿದರು.
ಕಾರ್ಕಳದ ತಹಶೀಲ್ದಾರರು ಆಗಿರುವ ಪ್ರತಿಭಾ ಅವರು ಅತಿಥಿಗಳಾಗಿ ಭಾಗವಹಿಸಿ ತಮ್ಮ ಮಾತಿನಲ್ಲಿ “ಜೀವನದಲ್ಲಿ ನಗು ಮತ್ತು ಪೌಷ್ಟಿಕ ಆಹಾರ ಪದ್ದತಿ ಸರ್ವತೋಮುಖ ಆರೋಗ್ಯಕ್ಕೆ ಪೂರಕ” ಎಂದು ನುಡಿದರು. ರೋಟರಿ ಮಾಜಿ ಜಿಲ್ಲಾ ಗವರ್ನರ್ ಡಾ ಭರತೇಶ್ ಆದಿರಾಜ್ ಪ್ರಸ್ಥಾವಿಕವಾಗಿ ಮಾತಾಡಿದರು, ಇತರ ಅತಿಥಿಗಳಾಗಿ ತಾಲೂಕು ಆರೋಗ್ಯಾಧಿಕಾರಿ ಡಾ ಸಂದೀಪ್ ಕುಡ್ವ, ಡಾ ದಿತೇಶ್, ಹ್ರದ್ರೋಗ ತಜ್ಞ ಕೆಎಂಸಿ ಮಂಗಳೂರು, ಡಾ ಸಂಜಯ್, ಪ್ರಭಾರ ಮುಖ್ಯ ವೈದ್ಯಾಧಿಕಾರಿ ಡಾ ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳ, ರೋಟರಾಕ್ಟ್ ಕ್ಲಬ್ ಶ್ರೀ ಭುವನೇಂದ್ರ ಕಾಲೇಜು, ಅಧ್ಯಕ್ಷೆ ಅಕ್ಷಿತಾ ಶೆಟ್ಟಿಗಾರ್ ಭಗವಹಿಸಿದ್ದರು. ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಅಧ್ಯಕ್ಷ ಉಪೇಂದ್ರ ವಾಗ್ಲೆ ಸ್ವಾಗತಿಸಿದರು,
ಕಾರ್ಯದರ್ಶಿ ಪ್ರಶಾಂತ್ ಜೈನ್ ವಂದಿಸಿದರು. ರಾಜೇಶ್ ಕುಂಟಾಡಿ ಮತ್ತು ಅನುಷಾ ಪ್ರಭು ಕಾರ್ಯಕ್ರಮದ ನಿರುಪಣೆಯನ್ನು ಮಾಡಿದರು.