ಕಾರ್ಕಳ :ಸೆಪ್ಟೆಂಬರ್ 27:ಅಭ್ಯುದಯ ಕ್ರೆಡಿಟ್ ಕೊ. ಓಪರೇಟಿವ್ ಸೊಸೈಟಿ ಲಿಮಿಟೆಡ್, ಕಾರ್ಕಳ . ಇದರ 2024-25 ವಾರ್ಷಿಕ ಮಹಾ ಸಭೆಯು ಮಾನ್ಯ ಶ್ರೀ ಐವನ್ ಪಿಂಟೊ ಇವರ ಸಭಾ ಅಧ್ಯಕ್ಷತೆಯಲ್ಲಿ ಜರುಗಿತು.
16.9.2024ಸೋಮವಾರ ಬೆಳಿಗ್ಗೆ 11.30 ಕ್ಕೆ ಶ್ರೀ ವೇಣುಗೋಪಾಲ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ಮಾನ್ಯ ಹೆನ್ರಿ ಸಾಂತ್ ಮಯೋರ್ ಇವರಿಗೆ ಸಮಾಜ ಸೇವಕರಾಗಿ ಶಾಲು,ಫಲಪುಷ್ಪ,ಹೂ ಹಾರ,ಧನ ಹಾಗೂ ನೆನಪಿನ ಕಾಣಿಕೆ ನೀಡಿ ನೆರೆದಿದ್ದ ಗಣ್ಯರ ಸಮೂಹದಲ್ಲಿ ಗೌರವಿಸಲಾಯಿತು.
ಈ ಸಮಯದಲ್ಲಿ ಸೊಸೈಟಿ ನಿರ್ದೇಶಕರುಗಳಾದ ಶ್ರೀ ಸುರೇಂದ್ರ, ಶ್ರೀ ಟಿ.ಕೆ ರಘುವೀರ್, ಶ್ರೀ ರಮನಾಥ್ ನಾಯಕ್, ಶ್ರೀ ಉಮೇಶ್ ರಾವ್, ಶ್ರೀ ಶ್ರೀನಿವಾಸ್ ಪ್ರಭು, ಶ್ರೀ ಸುಧಾಕರ ಶೆಟ್ಟಿ, ಶ್ರೀ ರಮೇಶ್ M.ಸಾಲಿಯನ್,ಶ್ರೀಮತಿ ಲಕ್ಷಿ V.ಪೈ ,ಶ್ರೀ ದಿನೇಶ್, ಸೊಸೈಟಿ ಪ್ರಭಂಧಕರು ಶ್ರೀಮತಿ ದಿವ್ಯ ಪೈ ವೇದಿಕೆಯಲ್ಲಿದ್ದರು.
ಪ್ರಭಂಧಕರಾದ ಶ್ರೀಮತಿ ದಿವ್ಯ ಪೈ ಉಪಸ್ಥಿತಿಯಿದ್ದವರನ್ನು ಎಲ್ಲರಿಗೂ ಸ್ವಾಗತಿಸಿದರು, ಭುವನೇಂದ್ರ ಕಾಲೇಜು ಶಿಕ್ಷಕರಾದ ಶ್ರೀ ಮಾನ್ಯ ಗಣೇಶ್ ಜಲ್ಸೂರ್ ಕಾರ್ಯ ನಿರ್ವಹಣರಾಗಿದ್ದರು, ಶ್ರೀ ರೂಪಕ್ ಮಿಯಾರ್ ಸವ೯ರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಭೋಜನದೊಂದಿಗೆ ಕಾಯ೯ಕ್ರಮ ಸಮಾಪನಗೊಂಡಿತು .