ಉಡುಪಿ :ಸೆಪ್ಟೆಂಬರ್ 27:ಶ್ರೀ ವೆಂಕಟರಮಣ ಮಹಿಳಾ ಕಾಲೇಜು, ಕಾರ್ಕಳ ಇಲ್ಲಿನ ಪ್ರಸಕ್ತ ವರ್ಷದ ಲಲಿತ ಕಲಾ ಸಂಘವು ವರ್ಧಮಾನ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಶಶಿಕಲಾ ಹೆಗ್ಡೆ ಅವರಿಂದ ಉದ್ಘಾಟನೆ ಗೊಂಡಿತು. ಈ ಕಾರ್ಯಕ್ರಮದಲ್ಲಿ ಅವರು ಕಲೆ ಮತ್ತು ಸಂಸ್ಕೃತಿಯ ಮಹತ್ವವನ್ನು ತಿಳಿಸಿದರು. ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ವಿಧದ ಪ್ರತಿಭೆಯಿರುತ್ತದೆ. ನಮ್ಮ ಪ್ರತಿಭೆಯನ್ನು ನಾವೇ ಗುರುತಿಸಿ ಪೋಷಿಸಬೇಕು, ಸ್ವಾವಲಂಭಿಗಳಾಗಿ ಬಾಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಉಷಾ ನಾಯಕ್, ಲಲಿತ ಕಲಾ ಸಂಘದ ನಿರ್ದೇಶಕಿಯಾದ ಅಸಿಸ್ಟೆಂಟ್ ಪ್ರೊ. ಸರಿತಾ ರೀನಾ ಡಿ’ಸೋಜರವರು ಹಾಗೂ ಲಲಿತ ಕಲಾ ಸಂಘದ ವಿದ್ಯಾರ್ಥಿ ಪ್ರತಿನಿಧಿಗಳಾದ ಸ್ವಾತಿ, ಸಹನ, ಯಶಸ್ವಿನಿ, ಸರಸ್ವತಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಯಿಷಾ ಸ್ವಾಗತಿಸಿ, ದಿಶ ವಂದಿಸಿದರು. ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು.