ಉಡುಪಿ :ಸೆಪ್ಟೆಂಬರ್ 27: ಶಿರ್ವ ನಾಲ್ಕುಬೀದಿ-ಎಡ್ಮೇರು-ಪಳ್ಳಿ ರಸ್ತೆಯ ಎಡ್ಮೇರು ಗಣಶ್ರೀ ಗಾರ್ಡ್‌ನ್ ಲೇಔಟ್ ಬಳಿ ಗುರುವಾರ ಬಾಲಕನಿಗೆ ಟೆಂಪೋ ಢಿಕ್ಕಿ ಹೊಡೆದಿದೆ
ಅಪಘಾತದ ತೀವ್ರತೆಗೆ ಬಾಲಕ ಗಂಭೀರ ಗಾಯಗೊಂಡಿದ್ದಾನೆ.ಗಾಯಾಳುವನ್ನು ನಿಂಜೂರು ಗ್ರಾಮದ ಬಾಲಕ ಭರತ (14) ಎಂದು ಗುರುತಿಸಲಾಗಿದೆ
.ಆತ ಎಡ್ಮೇರು ಅಂಗಡಿಗೆ ಹೋಗಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ರಸ್ತೆ ದಾಟುತ್ತಿದ್ದಾಗ ಟೆಂಪೋ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ .ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.