ಉಡುಪಿ, ಸಸೆಪ್ಟೆಂಬರ್ .25: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ಉಡುಪಿ ನಗರದ ಕಿನ್ನಿಮುಲ್ಕಿಯ ಎಂಟಿಆರ್ ಹೊಟೇಲ್ ಮುಂಭಾಗ ದಲ್ಲಿ ಸೆಪ್ಟೆಂಬರ್ 24 ಮಂಗಳವಾರ ಬೆಳಗ್ಗೆ ನಡೆದಿದೆ.
ಬ್ರಹ್ಮಗಿರಿಯ ಹಿರಿಯ ನಾಗರಿಕರೊಬ್ಬರು ತಮ್ಮ ಹಳೆಯ ಕಾರಿನಲ್ಲಿ ಹೋಗುತ್ತಿದ್ದಾಗ ಏಕಾಏಕಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಕೂಡಲೇ ಅವರು ಕಾರನ್ನು ರಸ್ತೆ ಬದಿ ನಿಲ್ಲಿಸಿ ಕಾರಿನಿಂದ ಹೊರಗೆ ಬಂದರು. ಈ ವೇಳೆ ಕಾರಿನ ಎದುರು ಭಾಗಕ್ಕೆ ಸಂಪೂರ್ಣ ಬೆಂಕಿ ಆವರಿಸಿದೆ.
ಕೂಡಲೇ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಕಾರಿನ ಬ್ಯಾಟರಿಯಲ್ಲಿ ಶಾರ್ಟ್ ಸಕ್ಯೂಟ್ ಆದ ಕಾರಣ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಈ ಅವಘಡದಿಂದ ಕಾರಿಗೆ ಹಾನಿಯಾಗಿದೆ.