ಮುಂಡ್ಕೂರು :ಸೆಪ್ಟೆಂಬರ್ 25:ಗ್ರಾಮೀಣ ಭಾಗದ ಮಣ್ಣಿನ ಸೊಗಡಿನ ಪರಿಮಳವನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವನ್ನು ಮಾಡುವ ಕೆಸರದ ಗುಬ್ಬುಲು ಕಾರ್ಯಕ್ರಮ ಅರ್ಥಪೂರ್ಣ ಎಂದು ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಮಧ್ವಪತಿ ಆಚಾರ್ಯ ಹೇಳಿದರು. ಅವರು ಮುಂಡ್ಕೂರು, ಮುಲ್ಲಡ್ಕ,ಇನ್ನಾ ಗ್ರಾಮಸ್ಥರಿಗಾಗಿ ನಡೆದ ಕೆಸರ್ದ ಗೊಬ್ಬುಲು ಕಾರ್ಯಕ್ರಮದಲ್ಲಿ ಮಾತನಾಡಿದರು .
ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸುರೇಂದ್ರ ಶೆಟ್ಟಿ ಮಾತನಾಡಿ ಸಮಾಜಮುಖಿ ಚಿಂತನೆಗಳ ಮೂಲಕ ಮನೆ ಮಾತಾಗಿರುವ ನಮ್ಮ ಫ್ರೆಂಡ್ಸ್ ಗ್ರಾಮೀಣ ಕ್ರೀಡೆಗಳನ್ನು ಸಂಘಟಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು. ಇದೇ ಸಂದರ್ಭದಲ್ಲಿ ಕಂಬಳ ಕ್ಷೇತ್ರದ ಸಾಧಕ ಯಜಮಾನ ಬೋಳದ ಗುತ್ತು ಸತೀಶ್ ಶೆಟ್ಟಿ ಅವರ ಚಾಂಪಿಯನ್ ಕೋಣಗಳಾದ ಧೋನಿ ಹಾಗೂ ಬೊಲ್ಲ ಗೆ ಸನ್ಮಾನಿಸಲಾಯಿತು. ಮುಲ್ಲಡ್ಕ ಪರಾರಿ ರವೀಂದ್ರ ಶೆಟ್ಟಿಯವರು ಕೋಣಗಳನ್ನು ಗೌರವಿಸಲಾಯಿತು. ನಮ್ಮ ಫ್ರೆಂಡ್ಸ್ ಮುಂಡ್ಕೂರು ಅಧ್ಯಕ್ಷ ಅರುಣ್ ರಾವ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮುನಿಯಲು ಉದಯ್ ಕುಮಾರ್ ಶೆಟ್ಟಿ , ಮುಲ್ಲಡ್ಕ ಪರಾರಿ ರವೀಂದ್ರ ಶೆಟ್ಟಿ ಮುಂಡ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಪ್ಪ ಸಪಳಿಗ, ಜಿನ್ನೋಜಿ ರಾವ್ ಜಯರಾಮ್ ಕುಲಾಲ್, ಬೋಳದ ಗುತ್ತು ಸಂತೋಷ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಕರ್ನಿರೆ ,ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯೆ ಸುಜಾತ ಸುಭೋದ್ ಶೆಟ್ಟಿ ,ಬೋಳದ ಗುತ್ತು ಸಂತೋಷ್ ಶೆಟ್ಟಿ, ಶರತ್ ಶೆಟ್ಟಿ ಉದಯಹೆಗ್ಡೆ, ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಶೇಖರ್ ಶೆಟ್ಟಿ, ಸುಧಾಕರ್ ಕುಲಾಲ್ ಉದಯ ಮುಂಡ್ಕೂರು ,ಆನಂದ ಸಾಲ್ಯಾನ್ , ಅರುಣ್ ಕುಮಾರ್, ನಿಶಾಂತ್ ಗುರುತಿಲಕ್, ರಮೇಶ್ ಪೂಜಾರಿ, ನವನೀತ್ ಅಮೀನ್ ,ಸುರೇಶ್ ಪೂಜಾರಿ ಪ್ರಮೋದ್ ಕಜೆ ಉಪಸ್ಥಿತರಿದ್ದರು. , ನಮ್ಮ ಫ್ರೆಂಡ್ಸ್ ಗೌರವ ಸಲಹೆಗಾರ ಉದಯ ಮುಂಡ್ಕೂರು ಸ್ವಾಗತಿಸಿ, ಶರತ್ ಶೆಟ್ಟಿ ಸಂಕಲಕರಿಯ ವಂದಿಸಿದರು.