ಉಡುಪಿ – ಸೆಪ್ಟೆಂಬರ್ .24 – ಪೈಲೇರಿಯಾ ಹಾಗೂ ಜ್ವರದಿಂದ ಬಳಲಿದ ನಡೆಯಲಾಗದ ಅಸ್ವಸ್ಥರಾದ ವೃದ್ದರಾದ ಗೋಪಾಲ (68 ವರ್ಷ) ಇವರನ್ನು ವಿಶುಶೆಟ್ಟಿಯವರು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ವೃದ್ದರು ತನಗೆ ಮಡದಿ ಇದ್ದು, ಮಕ್ಕಳಿಲ್ಲ ಎಂದು ಮಾಹಿತಿ ನೀಡಿದ್ದಾರೆ. ರಕ್ಷಣಾ ಸಮಯ ಸಿಸ್ಟರ್ ಜ್ಯೋತಿಯವರು ರೋಗಿಯನ್ನು ಉಪಚರಿಸಿ ಸಹಕರಿಸಿದ್ದಾರೆ.
ಸಂಬಂಧಿಕರು ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸುವಂತೆ ವಿಶುಶೆಟ್ಟಿಯವರು ವಿನಂತಿಸಿದ್ದಾರೆ.