ಉಡುಪಿ, ಸೆಪ್ಟೆಂಬರ್ 24: ಬ್ರಹ್ಮಾವರದಲ್ಲಿ ಈಗ ಕಾರ್ಯಾಚರಿಸುತ್ತಿರುವ ಸಂಚಾರಿ ನ್ಯಾಯಾಲಯದಲ್ಲಿ ಅಗಾಧ ಸಂಖ್ಯೆಯಲ್ಲಿ ಪ್ರಕರಣಗಳು ಬಾಕಿ ಇರುವುದರಿಂದ ಆದಷ್ಟು ಶೀಘ್ರದಲ್ಲಿ ಬ್ರಹ್ಮಾವರಕ್ಕೆ ಖಾಯಂ ನ್ಯಾಯಾಲಯ ವನ್ನು ಮಂಜೂರು ಮಾಡು ವಂತೆ ಉಡುಪಿ ವಕೀಲರ ಸಂಘದ ನಿಯೋಗವೊಂದು ಇಂದು ಬೆಂಗಳೂರಿನಲ್ಲಿ ರಾಜ್ಯ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅವರನ್ನು ಭೇಟಿ ಯಾಗಿ ಆಗ್ರಹಿಸಿತು.
ಅಧ್ಯಕ್ಷ ರೆನೋಲ್ಡ್ ಪ್ರವೀಣ್‌ಕುಮಾರ್ ನೇತೃತ್ವದಲ್ಲಿ ಉಡುಪಿ ವಕೀಲರ ಸಂಘದ ನಿಯೋಗವೊಂದು ಕರ್ನಾಟಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್. ಕೆ. ಪಾಟೀಲ್‌ರನ್ನು ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಭೇಟಿಯಾಗಿ ಈ ಬಗ್ಗೆ ಚರ್ಚೆ ನಡೆಸಿತು.