ಸೆಪ್ಟೆಂಬರ್ 23:ರಿಯಾ ಸಿಂಘಾ ಅವರು ‘ಮಿಸ್ ಯೂನಿವರ್ಸ್ ಇಂಡಿಯಾ 2024’ ಆಗಿ ಹೊರಹೊಮ್ಮಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ಭಾನುವಾರ (ಸೆಪ್ಟೆಂಬರ್ 22) ಈ ಕಾರ್ಯಕ್ರಮ ನಡೆದಿದೆ. ಊರ್ವಶಿ ರೌಟೇಲಾ ಅವರು ಈ ಕಿರೀಟವನ್ನು ತೊಡಿಸಿದ್ದಾರೆ.
ನಾನು ಮಿಸ್ ಯೂನಿವರ್ಸ್ ಇಂಡಿಯಾ 2024 ಕಿರೀಟ ಗೆದ್ದಿದ್ದೇನೆ. ನಾನು ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ನಾನು ಇಲ್ಲಿಗೆ ಬರಲು ಸಾಕಷ್ಟು ಕಷ್ಟಪಟ್ಟಿದ್ದೇನೆ. ಈ ಕಿರೀಟಕ್ಕೆ ನಾನು ಅರ್ಹ ಎಂದು ಭಾವಿಸುತ್ತೇನೆ. ಈ ಮೊದಲಿನ ವಿನ್ನರ್ಗಳಿಂದ ನಾನು ಸ್ಫೂರ್ತಿ ಪಡೆದಿದ್ದೇನೆ’ ಎಂದಿದ್ದಾರೆ
ಮಿಸ್ ಯೂನಿವರ್ಸ್ 2024’ನ ಮೊದಲ ರನ್ನರ್ ಅಪ್ ಆಗಿ ಪ್ರಂಜಲ್ ಪ್ರಿಯಾ ಮೊದಲ ರನ್ನರ್ ಅಪ್ ಆಗಿದ್ದಾರೆ. ಚವಿ ವರ್ಗ್ ಅವರು ಎರಡನೇ ಸ್ಥಾನ ಪಡೆದಿದ್ದಾರೆ. ಸುಷ್ಮಿತಾ ರಾಯ್ ಅವರು ಮೂರನೇ ರನ್ನರ್ ಅಪ್ ಆಗಿದ್ದಾರೆ.
ಊರ್ವಶಿ ರೌಟೇಲಾ ಅವರು 2015ರ ಮಿಸ್ ಯೂನಿವರ್ಸ್ ಇಂಡಿಯಾ ಫೈನಲಿಸ್ಟ್ ಆಗಿದ್ದರು. ಅವರು ಈ ಈ ಸ್ಪರ್ಧೆಯಲ್ಲಿ ಜಡ್ಜ್ ಪ್ಯಾನಲ್ನಲ್ಲಿ ಇದ್ದರು. ‘ಈ ವರ್ಷ ಮಿಸ್ ಯೂನಿವರ್ಸ್ ಕಿರೀಟ್ ಭಾರತಕ್ಕೆ ಸಿಗಲಿ ಎಂದು ಆಶಿಸುತ್ತೇನೆ’ ಎಂದರು.
ಮಿಸ್ ಯೂನಿವರ್ಸ್ ಕಿರೀಟ ಗೆದ್ದರೆ ಸಹಜವಾಗಿಯೇ ಅವರ ಖ್ಯಾತಿ ಹೆಚ್ಚಲಿದೆ. ಸಿನಿಮಾ ರಂಗದಿಂದ ಸಾಕಷ್ಟು ಆಫರ್ಗಳು ಕೂಡ ಬರುತ್ತವೆ. ಈವರೆಗೆ ಭಾರತದ ಮಿಸ್ ಯೂನಿವರ್ಸ್ ಗೆದ್ದವರು ಎಂದರೆ ಸುಷ್ಮಿತಾ ಸೇನ್ (1994), ಲಾರಾ ದತ್ (2000) ಹಾಗೂ ಹರ್ನಾಜ್ ಸಂಧು ಇದನ್ನು ಗೆದ್ದಿದ್ದಾರೆ.