ಕಾರ್ಕಳ: ಸೆಪ್ಟೆಂಬರ್ 23: ಸ್ವರ್ಣ ಗ್ರಾಮೀಣ ಸೌಹಾರ್ದ ಸಹಕಾರಿ ಇದರ ವಾರ್ಷಿಕ ಮಹಾಸಭೆಯು 22. 9. 2024ರಂದು ಕೊಂಕಣ ಪ್ಲಾಜ ದಲ್ಲಿ ಜರುಗಿತು.
ಉದ್ಘಾಟನೆಯನ್ನು ಕೆ ಎಂ ಕಲೀಲ್ ದೀಪ ಬೆಳಗಿಸಿ ಚಾಲನೆಯನ್ನು ನೀಡಿದರು. ಆನ್ಲೈನ್ ಸೇವೆಗಳನ್ನು ವಿನೂತನ ತಂತ್ರಜ್ಞಾನವನ್ನು ಯುನಿಗ್ಸ್ ಇದರ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ಬೆಂಗಳೂರು ಇದರ ಉಡುಪಿ ಮತ್ತು ಮಂಗಳೂರು ಉಭಯ ಜಿಲ್ಲಾ ಅಭಿವೃದ್ಧಿ ಅಧಿಕಾರಿಯಾದ ವಿಜಯ ಬಿ ಎಸ್ ನೆರವೇರಿಸಿದರು.
ಸಹಕಾರಿ ಸಾಮಾಜಿಕ ಕಾರ್ಯಕ್ರಮದ ಭಾಗವಾಗಿ ವೈದ್ಯಕೀಯ ಚಿಕಿತ್ಸೆಗೆ ಧನಸಹಾಯವನ್ನು ಈ ಸಂದರ್ಭದಲ್ಲಿ ನೀಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ಶೇಕ್ ಶಬ್ಬೀರ್ ವಹಿಸಿದ್ದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಸುಧಾಕರ ಪೂಜಾರಿ, ನಿರ್ದೇಶಕರಾದ ಉದಯಕುಮಾರ್ ಹೆಗಡೆ, ಸಂತೋಷ ಪೂಜಾರಿ, ರಮೇಶ್ ಶೆಟ್ಟಿ, ಸತೀಶ್ ಪೂಜಾರಿ ಶಕುಂತಲಾ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶ್ರೀಮತಿ ನಿರುಷ ಶೆಟ್ಟಿ, ನಗದು ಗುಮಾಸ್ತ ಶ್ರೀಮತಿ ಜ್ಯೋತಿ, inbi ಯ ನಿರ್ದೇಶಕರಾದ ರತ್ನಾಕರ್ ನಾಯಕ್, ಮತ್ತು ಅವರ ತಂಡದ ಸದಸ್ಯರು ಉಪಸ್ಥಿತರಿದ್ದು, ಸಭೆಯಲ್ಲಿ ಹಿರಿಯ ಪತ್ರಕರ್ತರು ಕಾರ್ಕಳ ತಾಲೂಕು v4 ಮಾಧ್ಯಮದ ವರದಿಗಾರರಾದ ಕೆ ಎಂ ಕಲೀಲ್ ಹಾಗೂ ಉಭಯ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಯಾದ ವಿಜಯ ಬಿ.ಸ್ ಅವರನ್ನು ಸನ್ಮಾನಿಸಲಾಯಿತು.