ಪರ್ಕಳ:ಸೆಪ್ಟೆಂಬರ್ 23:ಪರ್ಕಳ ಈಶ್ವರ ನಗರ ದಲ್ಲಿರುವ ಉಡುಪಿನಗರ ಸಭೆಗೆ ಸೇರಿದ್ದೆ ಎನ್ನಲಾದ. ಪ್ರಥಮ ಹಂತದ ಕುಡಿಯುವ ನೀರಿನ ಪಂಪ್ ಹೌಸ್ ಸಿನ ಮಧ್ಯರಾತ್ರಿ ಒಂದು ಗಂಟೆಯ ಸಮಯದ ವೇಳೆ ರಾತ್ರಿ ಅತಿ ವೇಗದಿಂದ ಬಂದ ಕಾರು ಪಂಪ್ ಹೌಸ್ ಸಿಗೆ ಒಳಗೆ ನುಗ್ಗಿದೆ ಅದೃಷ್ಟವಶಾತ್ ಅಲ್ಲಿ ರಾತ್ರಿ ಮಲಗುತ್ತಿದ್ದ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ
ಕಾರು ಮುಂಭಾಗ ಸಂಪೂರ್ಣ ನುಜ್ಜಾಗಿದ್ದು. ಪಂಪ್ ಹೌಸ್ ಸಿಗು ತುಂಬಾ ಹಾನಿಯಾಗಿದೆ. ಅಧಿಕಾರಿಗಳ ನಿರ್ಲಕ್ಷ. ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಪಟ್ಟಂತೆ. ಇಲ್ಲಿ ಯಾವುದೇ ಸುರಕ್ಷತಾ ಬೇಲಿ ಇಲ್ಲ. ಮುಂದೆ ಹಳೆ ರಸ್ತೆ ಇದೆ ಎಂಬುವುದು ಸೂಚನಾ ಫಲಕ ಇಲ್ಲ. ಈ ಪಂಪ್ ಹೌಸ್ ಮಣಿಪಾಲದ ಖಾಸಗಿ ಅವರು ಉಪಯೋಗಿಸುತ್ತಿದ್ದು. ಅಲ್ಲಿ ರಾಷ್ಟ್ರೀಯ ಹೆದ್ದಾರಿ ಅಡ್ಡಲಾಗಿ ರಸ್ತೆ ಅಗೆದು. ಪಂಪ ಹೌಸಿನ ನೀರು ಬಳಕೆ ಮಾಡುತ್ತಿದ್ದಾರೆ ಸಮರ್ಪಕವಾಗಿ ಅಗೆದ ರಸ್ತೆಯನ್ನು ಮುಚ್ಚದೆ ಕಾಮಗಾರಿ ನಡೆಸಿದ್ದಾರೆ.
ಇತ್ತೀಚೆಗೆ ಶಾಸಕರು ಬಂದು ಗುಂಡಿ ಮುಚ್ಚಿದ್ದರು. ಮತ್ತೆ ಗುಂಡಿ ತೆರೆದಿದೆ. ನಗರಸಭಾ ಪಂಪ್ ಹೌಸ್ ನ ಎದುರು ಕೃಷ್ಣ ಜನ್ಮಾಷ್ಟಮಿ ದಿನದಂದು ಇಲ್ಲಿ ಎರಡೆರಡು ಕಾರುಗಳು ಅಪಘಾತವಾಗಿತ್ತು.ಕಾರು ಸಂಪೂರ್ಣ ನುಗ್ಗಿತ್ತು. ಅಪಘಾತದ ನೆನಪು ಮರೆ ಮಾಚುವ ಮೊದಲೇ ಇದೀಗ ರೇಚಕದ ಒಳಗೆ ನುಗ್ಗಿದೆ ಕಾರು.. ಉಡುಪಿಯ ರಿಜಿಸ್ಟ್ರೇಷನ್ ಹೊಂದಿದ ಕಾರ್ ಇದಾಗಿದೆ. ಇಲ್ಲಿ ಹಳೆ ರಸ್ತೆಗೆ ಸಂಚರಿಸಬೇಕು ಹೊಸ ರಸ್ತೆಗೆ ಸಂಚರಿಸಬೇಕು ಎಂಬುದು ಯಾವುದೇ ಸೂಚನೆ ಫಲಕವಿಲ್ಲ..
ನಗರಸಭೆಯ ಪಂಪ್ ಹೌಸಿಗೂ ಸೂಕ್ತ ಬೇಲಿ ಇಲ್ಲ. ಪಕ್ಕದಲ್ಲಿ ಮನೆ ಇರುವುದರಿಂದ ಇಲ್ಲಿ ಯಾವುದೇ ರಕ್ಷಣೆಯ ತಡೆ ಬೇಲಿ ಇಲ್ಲವಾಗಿರುವುದರಿಂದ. ಸೂಕ್ತ ಬೇಲಿ ನಿರ್ಮಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ