ಕಾರ್ಕಳ :ಸೆಪ್ಟೆಂಬರ್ 22:ಪ್ರತೀ ವರ್ಷ ಗಣೇಶೋತ್ಸವ ಸಮಿತಿಗಳು ಗಣೇಶ ಹಬ್ಬಗಳನ್ನು ಭಕ್ತಿ ಭಾವಗಳಿಂದ ಅತ್ಯಂತ ವಿಜೃಂಭಣೆಯಾಗಿ ಆಚರಿಸಿಕೊಂಡು ಬರುವುದು ಸರ್ವೆ ಸಾಮಾನ್ಯ, ಅದರೆ ಭಕ್ತಿಯ ಆಚರಣೆಯೊಂದಿಗೆ ಸಾಮಾಜಿಕ ಕಳಕಳಿಯ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾರ್ವಜನಿಕರಿಗೆ ವೈದ್ಯಕೀಯ, ಶೈಕ್ಷಣಿಕ ಮತ್ತು ಕ್ರೀಡಾ ಅರ್ಥಿಕ ನೆರವನ್ನು ನೀಡುತ್ತಾ ಗಣೇಶ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬಂದಿರುವ ಕಾರ್ಕಳ ಬಸ್ಟ್ಯಾಂಡ್ ಗಣೇಶೋತ್ಸವ ಸಮಿತಿ ಕಾರ್ಯ ಶ್ಲಾಘನೀಯ ಎಂದು ಕಾರ್ಕಳ ಪುರಸಭೆಯ ಅದ್ಯಕ್ಷ ಯೋಗಿಶ್ ದೇವಾಡಿಗ ಅಭಿಪ್ರಾಯ ಪಟ್ಟರು ಅವರು ಇಂದು ಸ್ಥಳೀಯ ರಾಧಾಕೃಷ್ಣ ಸಭಾಭವನದಲ್ಲಿ ಕಾರ್ಕಳ ಬಸ್ಟ್ಯಾಂಡ್ ಗಣೇಶೋತ್ಸವ ಸಮಿತಿಯ ವತಿಯಿಂದ ಏಳು ಜನರಿಗೆ ಅರವತ್ತು ಸಾವಿರ ರೂಪಾಯಿ ಆರ್ಥಿಕ ನೇರವನ್ನು ವಿತರಿಸಿ ಮಾತನಾಡಿದರು.
ಸಾರ್ವಜನಿಕರು ಭಕ್ತಿಯಿಂದ ನೀಡಿದ ಹಣದ ಸದುಪಯೋಗವಾದರೆ ಮಾತ್ರ ಅದು ದೇವರಿಗೆ ಸಲ್ಲೂವುದರ ಜೊತೆಗೆ ಆಚರಣೆಗಳಿಗೂ ಒಳ್ಲೆಯ ಅರ್ಥ ಬರುತ್ತದೆ ದೇಣಿಗೆಯಾಗಿ ಬಂದ ಉಳಿಕೆ ಮೊತ್ತವನ್ನು ದೇವರ ಭಕ್ತರಿಗೇ ಸಹಾಯದ ರೂಪದಲ್ಲಿ ಹಿಂತಿರುಗಿಸುವ ಮೂಲಕ ಸಮಿತಿಯು ಇತರರಿಗೂ ಮಾದರಿಯಾಗಿದ್ದಾರೆ, ಈ ಪುಣ್ಯದ ಕೆಲಸ ಹೀಗೆಯೇ ಮುಂದುವರಿಯಲಿ ಎಂದು ಹಾರೈಸಿದರು.
ಸಮಿತಿಯ ಗೌರವಾದ್ಯಕ್ಷ ಜಗದೀಶ್ ಮಲ್ಯ ಸಂದರ್ಭೋಚಿತ ಮಾತುಗಳೊಂದಿಗೆ ಸಹಕಾರ ನೀಡಿದ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದರು. ಸ್ಥಾಪಕಾಧ್ಯಕ್ಷ ಶುಭದರಾವ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು, ಸಮಿತಿಯ ಅದ್ಯಕ್ಷ ಸುರೇಶ್ ದೇವಾಡಿಗ ಅದ್ಯಕ್ಷತೆ ವಹಿಸಿದ್ದರು.
ಸಮಿತಿಯ ಸದಸ್ಯರಿಗೆ ನಡೆದ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಜ್ಯೋತಿಷಿ ವಾದಿರಾಜ್ ಆಚಾರ್ಯ, ಗೌರವ ಸಲಹೆಗಾರ ಆದಿರಾಜ ಅಜಿರಿ, ಉಪಸ್ಥಿತರಿದ್ದರು ಕಾರ್ಯದರ್ಶಿ ಇಕ್ಬಾಲ್ ಆಹ್ಮದ್ ನಿರೂಪಿಸಿ ರಾಜಾರಾಮ್ ಕಾಮತ್ ಧನ್ಯವಾದವಿತ್ತರು.