ಉಡುಪಿ :ಸೆಪ್ಟೆಂಬರ್ 10:ಗಣೇಶ ಚತುರ್ಥಿ ಪ್ರಯುಕ್ತ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧವಿದ್ದರೂ, ಉದ್ಯಾವರ ಬಬ್ಬರ್ಯ ಗುಡ್ಡೆ ಕ್ರಾಸ್ ರಸ್ತೆ ಪಕ್ಕದ ಬಸ್ ತಂಗುದಾಣದ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಎಸ್. ಮಾನೆ ನೇತೃತ್ವದ ಪೊಲೀಸರ ತಂಡವು ಸೆ.7ರಂದು ವಶಕ್ಕೆ ಪಡೆದುಕೊಂಡಿದ್ದಾರೆ.
ಯಾವುದೇ ಪರವಾನಿಗೆ ಇಲ್ಲದೇ ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಮದ್ಯದ ಸ್ಯಾಚೆಟ್‌ಗಳನ್ನು ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿತ್ತು. ಚಾಲಕ ದಿಲೀಪ್ ಕುಮಾರ್ ಸಂಪಿಗೆ ನಗರ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ರಟ್ಟಿನ ಬಾಕ್ಸ್‌ನಲ್ಲಿ ಓರಿಜಿನಲ್ ಚೋಯ್ಸ ಎಂಬ ಹೆಸರಿನ ಒಟ್ಟು 48 ಟೆಟ್ರಾ ಸ್ಯಾಚೆಟ್‌ಗಳನ್ನು ತಂದಿದ್ದ ಆರೋಪಿ 18 ಟೆಟ್ರಾ ಸ್ಯಾಚೆಟ್‌ಗಳನ್ನು ಗ್ರಾಹಕರಿಗೆ ಮಾರಾಟ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಅದರ ಮೌಲ್ಯ 4,430 ರೂ., ಮೊಬೈಲ್ ಫೋನ್, ರಿಕ್ಷಾ ಸೇರಿದಂತೆ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.