ಪಡುಬಿದ್ರಿ:ಸೆಪ್ಟೆಂಬರ್ 08: ಉಚ್ಚಿಲ ಶ್ರೀಮಹಾಲಕ್ಷ್ಮಿ ದೇವಸ್ಥಾನಕ್ಕೆ ₹5.30 ಲಕ್ಷ ವೆಚ್ಚದಲ್ಲಿ 6 ಆಸನಗಳ ವಿದ್ಯುತ್ ಚಾಲಿತ ವಾಹನವನ್ನು ಕರ್ನಾಟಕ ಬ್ಯಾಂಕ್‌ನ ಸಿಎಸ್‌ಆರ್ ನಿಧಿಯಿಂದ ಗುರುವಾರ ಸಂಜೆ ದೇವಸ್ಥಾನಕ್ಕೆ ಹಸ್ತಾಂತರಿಸಲಾಯಿತು.
ಜಿ. ಶಂಕರ್ ಅವರಿಗೆ ಕರ್ನಾಟಕ ಬ್ಯಾಂಕಿನ ಉಡುಪಿ ರೀಜನಲ್ ಹೆಡ್ ವಾದಿರಾಜ ಭಟ್ ಅವರು ವಾಹನದ ಕೀಲಿಕೈಯನ್ನು ಹಸ್ತಾಂತರಿಸಿದರು.
ದೇವಳದ ಅರ್ಚಕ ವೇದಮೂರ್ತಿ ವಿಷ್ಣುಮೂರ್ತಿ ಭಟ್ ಪೂಜಾ ವಿಧಿವಿಧಾನ ನೆರವೇರಿಸಿದರು.
ಜಿ.ಶಂಕರ್ ಮಾತನಾಡಿ, ‘ಉಚ್ಚಿಲ ದಸರಾ ಸಂದರ್ಭ 60 ವರ್ಷ ವಯಸ್ಸು ಮೇಲ್ಪಟ್ಟವರಿಗೆ, ಅಂಗವಿಕಲರಿಗೆ ಈ ವಾಹನವು ಸಹಕಾರಿಯಾಗಲಿದೆ. ಕರ್ನಟಕ ಬ್ಯಾಂಕ್‌ನ ಸಂಬಂಧವು ಮಹಾಲಕ್ಷ್ಮಿ ದೇವಸ್ಥಾನದೊಂದಿಗೆ ಉತ್ತಮವಾಗಿದ್ದು, ಇಂತಹಾ ಕಾರ್ಯಗಳಿಂದ ಸಂಬಂಧ ಇನ್ನಷ್ಟು ಹೆಚ್ಚಾಗಲಿ’ ಎಂದರು.
ಕರ್ನಾಟಕ ಬ್ಯಾಂಕ್‌ನ ವಾದಿರಾಜ ಭಟ್ ಮಾತನಾಡಿ, ‘ನಮ್ಮ ಬ್ಯಾಂಕ್‌ನ ಸಿಎಸ್‌ಆರ್ ಯೋಜನೆಯಡಿ ವಿದ್ಯುತ್ ಚಾಲಿತ ವಾಹನವನ್ನು ಹಸ್ತಾಂತರಿಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಹಕಾರ ನೀಡಲಿದ್ದೇವೆ’ ಎಂದರು.
ದೇವಳದ ಸಮಿತಿಯ ಪ್ರಮುಖರಾದ ಗುಂಡು ಬಿ ಅಮೀನ್, ವಿನಯ್ ಕರ್ಕೇರ, ಗಿರಿಧರ ಸುವರ್ಣ, ಮೋಹನ್ ಬೇಂಗ್ರೆ, ಶರಣ್ ಮಟ್ಟು, ಸುಧಾಕರ ಕುಂದರ್, ಸುಭಾಶ್ಚಂದ್ರ ಕಾಂಚನ್, ನಾರಾಯಣ ಕರ್ಕೇರ, ಸುಜಿತ್ ಸಾಲ್ಯಾನ್ ಮೂಲ್ಕಿ, ಪುಂಡಲೀಕ ಹೊಸಬೆಟ್ಟು, ರವೀಂದ್ರ ಶ್ರೀಯಾನ್, ನಾರಾಯಣ ಕುಂದರ್ ಕಲ್ಮಾಡಿ, ಮೋಹನ್ ಬಂಗೇರ ಕಾಪು, ವಿಠಲ ಕರ್ಕೇರಾ, ಸುಧಾಕರ ಸುವರ್ಣ ಉಚ್ಚಿಲ, ಸುಗುಣಾ ಕರ್ಕೇರ, ಕರ್ನಾಟಕ ಬ್ಯಾಂಕಿನ ಮಹಾಪ್ರಬಂಧಕ ಮನೋಜ್ ಕೋಟ್ಯಾನ್, ಅಂಬಾಗಿಲು ಶಾಖಾ ಪ್ರಬಂಧಕ ಶಶಿಕಾಂತ್ ಬಂಗೇರ, ದೇವಳದ ವ್ಯವಸ್ಥಾಪಕ ಸತೀಷ್ ಅಮೀನ್ ಪಡುಕೆರೆ ಇದ್ದರು