ಉಡುಪಿ : ಸೆಪ್ಟೆಂಬರ್ 06:ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಪ್ರಸನ್ನ ಗಣಪತಿಯ ಸನ್ನಿಧಾನದಲ್ಲಿ ಇದೇ ತಿಂಗಳ ತಾರೀಕು ಏಳರ ಶನಿವಾರದಂದು ಗಣೇಶ ಚತುರ್ಥಿಯ ಪ್ರಯುಕ್ತ ಅಷ್ಟೋತ್ತರ ಶತ ನಾಳಿ ಕೇರ ಗಣ ಯಾಗವು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರಲಿದೆ…
ಆ ಪ್ರಯುಕ್ತ ಪ್ರಾತಃಕಾಲದಿಂದ ಮೂಡು ಗಣಪತಿ ಸೇವೆ, ಮಧ್ಯಾಹ್ನ ಪ್ರಸನ್ನ ಪೂಜೆ ಸಂಜೆ ರಂಗ ಪೂಜೆ ನೆರವೇರಲಿದೆ.. ಕ್ಷೇತ್ರದ ವತಿಯಿಂದ ನೆರವೇರಲಿರುವ ಅಷ್ಟೋತ್ತರ ಶತ ನಾಳಿಕೇರ ಗಣಯಾಗದಲ್ಲಿ ಭಕ್ತರುಗಳು ಸೇವೆ ಸಲ್ಲಿಸಬಹುದು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ…