ಬೆಂಗಳೂರು :ಸೆಪ್ಟೆಂಬರ್ 05: ಡೆಂಗ್ಯೂ ರೋಗವನ್ನು ಸಾಂಕ್ರಾಮಿಕ ಕಾಯಿಲೆ ಎಂಬುದಾಗಿ ರಾಜ್ಯ ಸರಕಾರ ಘೋಷಣೆ ಮಾಡಿದೆ. ಜೊತೆ ಜೊತೆಗೆ ಸ್ವಚ್ಛತೆಯನ್ನು ಕಾಪಾಡುವಂತೆಯೂ ಖಡಕ್ ಸೂಚನೆ ನೀಡಿದೆ. ಒಂದು ವೇಳೆ ಸ್ವಚ್ಛತೆಯನ್ನು ಕಾಪಾಡದೇ ಇದ್ದರೇ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ.
ಡೆಂಘಿ ಜ್ವರವನ್ನು ಸಾಂಕ್ರಾಮಿಕ ಕಾಯಿಲೆ ಎಂದು ಘೋಷಿಸಲಾಗಿದೆ. ರಾಜ್ಯದಲ್ಲಿ ಈ ವರ್ಷ ಡೆಂಘಿ ಪ್ರಕರಣಗಳು ಅಧಿಕ ಸಂಖ್ಯೆಯಲ್ಲಿ ವರದಿಯಾದ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸಾಂಕ್ರಾಮಿಕ ರೋಗಗಳ ಕಾಯ್ದೆ-2020ರ ಅಡಿಯ ನಿಯಮಗಳಿಗೆ ತಿದ್ದುಪಡಿ ಮಾಡಿ, “ಕರ್ನಾಟಕ ಸಾಂಕ್ರಾಮಿಕ ರೋಗಗಳು (ತಿದ್ದುಪಡಿ ನಿಯಮಗಳು)2024” ಎಂಬ ಶೀರ್ಷಿಕೆಯಡಿ ಅಧಿಸೂಚನೆ ಹೊರಡಿಸಲಾಗಿದೆ.
ಹೀಗಿದೆ ನಗರ ಪ್ರದೇಶದ ದಂಡದ ವಿವರ
ರೂ.400 ಕುಟುಂಬಗಳಿಗೆ
ರೂ.1000 ವಾಣಿಜ್ಯ ಸಂಸ್ಥೆ, ಕಚೇರಿಗಳು, ಶಾಲಾ-ಕಾಲೇಜುಗಳು, ಆರೋಗ್ಯ ಸೇವಾ ಕ್ಷೇತ್ರಗಳಿಗೆ
ರೂ.2000 ಖಾಲಿ ನಿವೇಶನಗಳಿಗೆ
ಹೀಗಿದೆ ಗ್ರಾಮೀಣ ಪ್ರದೇಶದ ದಂಡದ ವಿವರ
ರೂ.200 ಗ್ರಾಮೀಣ ಪ್ರದೇಶಗಳಲ್ಲಿನ ಕುಟುಂಬಗಳಿಗೆ
ರೂ.500 ಗ್ರಾಮೀಣ ಪ್ರದೇಶದ ವಾಣಿಜ್ಯ ಸಂಸ್ಥೆಗಳು, ಕಚೇರಿಗಳು, ಶಾಲಾ-ಕಾಲೇಜುಗಳು, ಆರೋಗ್ಯ ಸೇವಾ ಕ್ಷೇತ್ರಗಳಿಗೆ
ರೂ.1000 ಖಾಲಿ ನಿವೇಶನಗಳಿಗೆ