ಕುಂದಾಪುರ:ಆ.29 : ಕುಂದಾಪುರ ಪುರಸಭೆಗೆ ಒಂದೂಕಾಲು ವರ್ಷದ ಬಳಿಕ ಅಧ್ಯಕ್ಷ ಉಪಾಧ್ಯಕ್ಷ ರ ಆಯ್ಕೆ ಇಂದು ಗುರುವಾರ(ಆ.29ರಂದು) ನಡೆದಿದೆ.
ಬಿಜೆಪಿಯ ಹಿರಿಯ ಸದಸ್ಯ ಮೋಹನದಾಸ ಶೆಣೈ ಅಧ್ಯಕ್ಷ ರಾಗಿ ,ಬಿಜೆಪಿಯ ವನಿತಾ ಬಿಲ್ಲವ ಉಪಾಧ್ಯಕ್ಷೆಯಾಗಿ ಚುನಾವಣೆಯಲ್ಲಿ ಆಯ್ಕೆಯಾದರು.
ಕಾಂಗ್ರೆಸ್ ನಿಂದ ಚಂದ್ರಶೇಖರ ಖಾರ್ವಿ ಹಾಗೂ ಪಕ್ಷೇತರ ಅಭ್ಯರ್ಥಿ ಕಮಲಾ ಮಂಜುನಾಥ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ 14 ಸದಸ್ಯಬಲ ಕಾಂಗ್ರೆಸ್ 8 ಸದಸ್ಯ ಬಲ ಹೊಂದಿದೆ. ಕಾಂಗ್ರೆಸ್ ನ ಸದಸ್ಯೆ ಲಕ್ಷ್ಮೀ ಬಾಯಿ ಅನಿವಾರ್ಯ ಕಾರಣದಿಂದ ಗೈರಾಗಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ,ಶಾಸಕ ಕಿರಣ್ ಕುಮಾರ್ ಕೊಡ್ಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.
ಬಿಜೆಪಿ 16 ಹಾಗೂ ಕಾಂಗ್ರೆಸ್ 7 ಪಕ್ಷೇತರ 1 ಸದಸ್ಯರ ಹಾಜರಾತಿ ಇತ್ತು. ಬಿಜೆಪಿ 16 ಮತಗಳನ್ನು ಕಾಂಗ್ರೆಸ್ 8 ಮತಗಳನ್ನು ಪಡೆಯಿತು. ತಹಶಿಲ್ದಾರ್ ಶೋಭಾಲಕ್ಷ್ಮೀ ಮತದಾನ ಪ್ರಕ್ರಿಯೆ ನಡೆಸಿದರು. ಮುಖ್ಯಾಧಿಕಾರಿ ಆನಂದ ಜೆ. ಉಪಸ್ಥಿತರಿದ್ದರು.