ಮಣಿಪಾಲ: ಆಗಸ್ಟ್ 28 :ಅಲೆವೂರಿನ ನೈಲಪಾದೆಯಲ್ಲಿ ನದಿಯಲ್ಲಿ ಈಜಾಡಲು ತೆರಳಿ ನೀರಿನಲ್ಲಿ ಮುಳುಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ(ಆ 28) ನಸುಕಿನ ವೇಳೆ ಕೊನೆಯುಸಿರೆಳೆದಿದ್ದಾನೆ.
ಮೃತ ವಿದ್ಯಾರ್ಥಿ ತ್ರಿವೆಂಡಮ್‌ನ ಆರೊನ್ ರೋಜರ್ ಲೀನ್(17) ಎಂಬಾತನಾಗಿದ್ದು, ಭಾನುವಾರ(ಆ 25) ಈಜಾಡಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಡೆಯಾಗಿದ್ದ. ಆರೊನ್ ಪೋಷಕರು ವಿದೇಶದಿಂದ ಆಗಮಿಸಿದ್ದಾರೆ.
ಈಜಲು ತೆರಳಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಇನ್ನೋರ್ವ ಕೋಲ್ಕತ್ತಾದ ಮಾಧವ್(18) ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಮುಂದುವರಿದಿದೆ. ಘಟನೆ ನಡೆದ ವೇಳೆ ಇಬ್ಬರು ವಿದ್ಯಾರ್ಥಿಗಳು ಪಾರಾಗಿದ್ದರು.
ನೀರಿನಲ್ಲಿ ಮುಳುಗಡೆಯಾಗಿದ್ದವರು ಸ್ಥಳೀಯರು ತುರ್ತು ಕಾರ್ಯಾಚರಣೆ ನಡೆಸಿ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿದ್ದರು. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.