ಉಡುಪಿ; ಆಗಸ್ಟ್ 27;ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಮುಖ ಆಕರ್ಷಣೆಯಲ್ಲಿ ಒಂದಾಗಿರುವ ಮೊಸರುಕುಡಿಕೆ ವಿಟ್ಲ ಪಿಂಡಿ ಉತ್ಸವ ಇಂದು ನಡೆಯಲಿದೆ.
ಶ್ರೀ ಕೃಷ್ಣ ವೇಷ ಸ್ಪರ್ಧೆಯಲ್ಲಿ ನೂರಾರು ಪುಟಾಣಿಗಳು ಪಾಲ್ಗೊಂಡರು. ಜತೆಗೆ ಜಿಲ್ಲೆಯ ವಿವಿಧ ಕಡೆಯಲ್ಲಿ ದೇವಸ್ಥಾನ, ಸಂಘ ಸಂಸ್ಥೆಗಳ ವತಿಯಿಂದ ಕೃಷ್ಣ ವೇಷ ಸ್ಪರ್ಧೆಗಳು ಜರಗಿದವು. ನಗರ ಸಹಿತ ವಿವಿಧೆಡೆ ಕೃಷ್ಣವೇಷ ಸ್ಪರ್ಧೆ ನಡೆದಿದ್ದು, ಬಹುತೇಕರು ತಮ್ಮ ಮಕ್ಕಳಿಗೆ ಕೃಷ್ಣ, ರಾಧೆಯರ ವೇಷ ತೊಡಿಸಿ ಸಂಭ್ರಮಿಸಿದರು.
ಸೋಮವಾರ ರಾತ್ರಿ ನೈವೇದ್ಯ ಸಮರ್ಪಿಸಿ ಮಹಾಪೂಜೆ ನಡೆಸಿದ ಶ್ರೀಪಾದರು ಚಂದ್ರೋದಯದ ವೇಳೆ 12.07 ಗಂಟೆಗೆ ಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಿದರು. ಬಳಿಕ ಭಕ್ತರಿಗೆ ಅರ್ಘ್ಯ ಬಿಡುವ ಅವಕಾಶ ಕಲ್ಪಿಸಲಾಗಿತ್ತು