ಉಡುಪಿ : ಆಗಸ್ಟ್ 26 :ಅಷ್ಟ ಮಠಗಳ ನಾಡು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮನೆಮಾಡಿದೆ,ಅಷ್ಟಮಿ ಆಚರಣೆಗೆ ಪರ್ಯಾಯ ಶ್ರೀ ಪುತ್ತಿಗೆ ಮಠದ ವತಿಯಿಂದ ಈಗಾಗಲೇ ಸಕಲ ಸಿದ್ಧತಾ ಕಾರ್ಯ ವಿಜೃಂಭಣೆಯಿಂದ ನಡೆಯುತ್ತಿದೆ.
ಕೃಷ್ಣ ಪ್ರಸಾದಕ್ಕೆ ಅಗತ್ಯ ಇರುವ ಉಂಡೆ, ಚಕ್ಕುಲಿ ಪಾಕ ತಜ್ಞರಿಂದ ತಯಾರಿ ಕಾರ್ಯ ಭರದಿಂದ ನಡೆಯುತ್ತಿದೆ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದುಕೃಷ್ಣ ಸ್ಪರ್ಧೆಗಳು, ವಿವಿಧ ಧಾರ್ಮಿಕ ಕಾರ್ಯಕ್ರಮ, ವಿಶೇಷ ಪೂಜೆ,ನೆರವೇರಲಿದೆ
ಉಡುಪಿಯ ಶ್ರೀಕೃಷ್ಣ ಮಠವನ್ನು ಹೂಗಳಿಂದ ಸಿಂಗರಿಸಲಾಗಿದೆ. ನಾಡಿನಲ್ಲೆಡೇ ಯಿಂದ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಶ್ರೀಕೃಷ್ಣನ ದರ್ಶನ ಪಡೆಯುತ್ತಿದ್ದಾರೆ. ರಾಜಾಂಗಣದಲ್ಲಿ ಮುದ್ದುಕೃಷ್ಣ ವೇಷ ಸ್ಪರ್ಧೆ ಹಬ್ಬಕ್ಕೆ ರಂಗು ತುಂಬಿದೆ
ಇನ್ನು ಅಷ್ಟಮಿಗೂ ಹುಲಿವೇಷಕ್ಕೂ ಅವಿನಾಭಾವ ಸಂಬಂಧ. ಹುಲಿವೇಷಧಾರಿಗಳು ಪೂಜೆ ಸಲ್ಲಿಸಿ ನಗರ ಸಂಚಾರ ನಡೆಸುವುದು ವಾಡಿಕೆ. ಹತ್ತಾರು ತಂಡಗಳು ಜಿಲ್ಲೆಯಾದ್ಯಂತ ಸಂಚರಿಸಿ ಜನರ ಕಣ್ಮನ ಸೆಳೆಯಲಿದೆ