ಕಾರ್ಕಳ : ಆಗಸ್ಟ್ 25:ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಕಳ ಇವರ ಆಶ್ರಯದಲ್ಲಿ ಸುಂದರ ಪುರಾಣಿಕ ಸ್ಮಾರಕ ಪ್ರೌಢ ಶಾಲೆ ಪೆರ್ವಾಜೆಯಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಜೇಸೀಸ್ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಕುಮಾರಿ ಸಮೀಕ್ಷಾ, ವರ್ಷಿಣಿ, ಆಯೇಷಾ, ಗೀತ್ ವೈಷ್ಣವಿ, ಕುಮಾರಿ ಸಾನಿಕಾ ಹೆಗ್ಡೆ ದ್ವಿತೀಯ ಸ್ಥಾನವನ್ನು ಹಾಗೂ ಪ್ರಾಥಮಿಕ ವಿಭಾಗದಲ್ಲಿ ರಜತ್, ವಿನೀತ್, ಜ್ಞಾನ್, ಲಿಖಿತ್, ಎಲ್ಡನ್ ಇವರು ಪ್ರಥಮ ಸ್ಥಾನಗಳನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಇವರನ್ನು ಶಾಲಾ ಅಧ್ಯಕ್ಷರು, ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯನಿ ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದರು.