ಕಾರ್ಕಳ :24 ಆಗಸ್ಟ್ :ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಆರೋಪಿತರ ಪರವಾಗಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಯ ವಿಚಾರಣೆಯ ಸಂದರ್ಭದಲ್ಲಿ ಕಾರ್ಕಳ ಪೊಲೀಸರು ವಶಪಡಿಸಿಕೊಂಡಿರುವ ಪರಶುರಾಮ ಮೂರ್ತಿಯನ್ನು ಮರಳಿ ನೀಡುವಂತೆ ಕೇಳಿದರು,
ಇದರ ಬಗ್ಗೆ ದೂರುದಾರ/ಪ್ರತಿವಾದಿ ನಂ.2 ನಲ್ಲೂರು ಕೃಷ್ಣ ಶೆಟ್ಟಿ ಯವರ ಪರ ವಕೀಲರಾದ ಶ್ರೀ.ಶ್ರೀಕಾಂತ್.ವಿ.ಕೆ. ಆಕ್ಷೇಪಿಸಿ ತನಿಖೆಯು ಬಾಕಿ ಇರುವ ಸಂದರ್ಭದಲ್ಲಿ ವಶಪಡಿಸಿಕೊಂಡಿರುವ ಪರಶುರಾಮ ಮೂರ್ತಿ ಭಾಗಗಳನ್ನು ಬಿಡುಗಡೆ ಮಾಡದಂತೆ ಕೇಳಿಕೊಂಡರು.
ಉಭಯ ಪಕ್ಷಗಳ ವಾದವನ್ನು ಆಲಿಸಿದ ಮಾನ್ಯ ಹೈಕೋರ್ಟ್ ವಶಪಡಿಸಿಕೊಂಡ ಪರಶುರಾಮ ಮೂರ್ತಿಯನ್ನು ಆರೋಪಿ ಕೃಷ್ಣ ನಾಯಕ್ ಗೆ ನೀಡಲು ನಿರಾಕರಿಸಿತು