ಮಣಿಪಾಲ : ಆಗಸ್ಟ್ 22:ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ 32 ವರ್ಷಗಳಿಂದ ತಲೆ ಮರಿಸಿಕೊಂಡಿದ್ದ ಆರೋಪಿಯನ್ನು ಉಡುಪಿ ಮಣಿಪಾಲ ಪೊಲೀಸರು ಬಂಧಿಸಿದ್ದಾರೆ
ಬಡಗಬೆಟ್ಟು ಗ್ರಾಮದ ಗಣೇಶ್ ಪ್ರಭು(54) ಬಂಧಿತ ಆರೋಪಿಯಾಗಿದ್ದಾನೆ. 1992ರ ಫೆ.13ರಂದು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ದಿನಾಂಕ: 13/02/1992 ನೇ ಸಾಲಿನಲ್ಲಿ ಶಿವರಾಮ ಎಂಬವರು ನೀಡಿದ ದೂರಿನ ಹಿನ್ನಲೆ ಗಣೇಶ್ ಪ್ರಭು ಸಹಿತ 12 ಜನರ ಮೇಲೆ ಪ್ರಕರಣ ದಾಖಲಾಗಿತ್ತು.
ಸದರಿ ಪ್ರಕರಣದಲ್ಲಿ ಒಬ್ಬ ಆರೋಪಿ ಗಣೇಶ್ ಪ್ರಭು (54) ತಂದೆ: ವಿಠಲ ಪ್ರಭು, ಬಡಗಬೆಟ್ಟು ಮಣಿಪಾಲ ಉಡುಪಿ ರವರು 2001 ರಿಂದ ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದು ಈತನ ವಿರುದ್ದ ಎಲ್.ಪಿ.ಸಿ ವಾರಂಟು ಹೊರಡಿಸಿರುತ್ತದೆ.
ಎಲ್ ಪಿ ಸಿ ವಾರಂಟು ಆರೋಪಿಯನ್ನು ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕ ರಾಘವೇಂದ್ರ ಸಿ ಮತ್ತು ಹೆಚ್ ಸಿ ಪ್ರಸನ್ನ ಉಪ್ಪೂರು ರವರು ಪತ್ತೆ ಮಾಡಿ 32 ವರ್ಷಗಳಿಂದ ತಲೆಮರೆಸಿಕೊಂಡು ಬೆಂಗಳೂರಿನಲ್ಲಿ ವಾಸವಿದ್ದ ಆರೋಪಿ ಗಣೇಶ್ ಪ್ರಭು ರವರನ್ನು ದಿನಾಂಕ: 21/08/2024 ರಂದು ವಶಕ್ಕೆ ಪಡೆದು ವಾರೆಂಟ್‌ನೊಂದಿಗೆ ಮಾನ್ಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಿರುತ್ತಾರೆ.