ಪರ್ಕಳ : ಆಗಸ್ಟ್ 22:ಪರ್ಕಳ ಇಲ್ಲಿನ ರಾಷ್ಟ್ರೀಯ ಹೆದ್ದಾರಿ /(169 ಎ) ಪರ್ಕಳದ ಹೃದಯ ಭಾಗದಲ್ಲಿ. 80ನೇ E-commerce ಗೆ ಹಾಗೂ ಮಾಹಾ ಲಿಂಗೇಶ್ವರ ದೇವಸ್ಥಾನಕ್ಕೆ ಹೋಗಲು ಅನುಕೂಲವಾಗುವಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತಿರುವಿ ನಲ್ಲಿ ರಸ್ತೆಯಲ್ಲಿ ಸಂಚರಿಸುವ ಕಾರು ಮತ್ತು ರಿಕ್ಷಾ ವಾಹನ ಅಪಘಾತ ನಡೆದು. ಪಾದಾಚಾರಿಯ ಮೇಲೆ ರಿಕ್ಷಾ ಎರೆಗಿದ್ದು ಅಶೋಕ್ ಶೆಟ್ಟಿಗಾರ್( 64 ವರ್ಷ) ತೀವ್ರ ತಲೆಗೆ ಏಟಾಗಿದ್ದು ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿರುತ್ತಾರೆ .
ಈ ಘಟನೆ ಎರಡು ಮೂರು ದಿವಸ ಹಿಂದೆ ನಡೆದಿದ್ದು. ಈ ಪ್ರದೇಶದಲ್ಲಿ ವಾಹನ ಅಪಘಾತವಾಗಿ ಇದೀಗ ಮೂರು ಜನರರು ಪ್ರಾಣ ಕಳೆದುಕೊಂಡಿದ್ದಾರೆ ಇದೇ ಪ್ರದೇಶದಲ್ಲಿ. ಇಲ್ಲಿ ಅಕ್ಕ ಪಕ್ಕದಲ್ಲಿ ಬ್ಯಾರಿಕೆಟ್ ಇದ್ದರೂ. ಅತ್ತಿಂದ ಇತ್ತ ಇತ್ತಿಂದ ಅತ್ತ ಚಲಿಸುವವರ ಸಂಖ್ಯೆ ಜಾಸ್ತಿ ಇದೆ. ಈ ಹಿಂದೆ ಇಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆಕಟ್ ಇಲ್ಲದೆ ಇರುವುದನ್ನು. ಕಾಮಗಾರಿ ನಡೆಸುವ ವೇಳೆ. ಈ ಭಾಗಕ್ಕೆ ಇಲ್ಲಿಯೇ ತಿರುಗು ಕೊಡಬೇಕೆಂದು. ಸ್ಥಳೀಯರು ಸಾರ್ವಜನಿಕರು. ಒತ್ತಾಯ ಮಾಡಿ. ರಸ್ತೆ ವಿಭಾಜಕವನ್ನು ಮಾಡಿದ್ದಾರೆ.
ಆದರೆ ವರುಷ ಉರುಳುದರೊಳಗೆ. ಮೂವರ ಪ್ರಾಣ ಕಳೆದುಕೊಂಡಿದೆ. ಹಾಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಲ್ಲಿ ಬ್ಲಾಕ್ ಸ್ಪಾಟ್ ಎಂದು ಗುರುತಿಸಬೇಕು. ಮತ್ತೆ ಇಲ್ಲಿ ಸೂಕ್ತವಾದ ಉತ್ತಮ ಗುಣಮಟ್ಟದ ರಿಫ್ಲೆಕ್ಟರ್ ಇರುವ ರಾತ್ರಿ ಹೊತ್ತು ಬೆಳಕು ಚೆಲ್ಲುವ ಬ್ಯಾರಿಕೆಗಳನ್ನು ಅಳವಡಿಸಬೇಕು. ಬಡಗುಬೆಟ್ಟಿನಿಂದ ಪರಕಲಕ್ಕೆ ಸೇರುವ ಕೂಡೂ ರಸ್ತೆಗೆ ರಸ್ತೆಗೆ ಹಂಪು ನಿರ್ಮಾಣ ಮಾಡಬೇಕು ವಾಹನ ಚಾಲಕರಿಗೆ ಸುರಕ್ಷಿತವಾಗಿ ಚಾಲನೆಗೆ ಅನುವು ಮಾಡಿಕೊಡಬೇಕು. ಈಗಾಗಲೇ ದಾರಿದೀಪ ಇಲ್ಲದೆ ಇರುವುದನ್ನು ಮನಗಂಡು ಜಿಲ್ಲಾಧಿಕಾರಿ ಕಚೇರಿಗೆ ಮನವಿ ನೀಡಲಾಗಿತ್ತು.
ನಿನ್ನೆ ದಾರಿದೀಪದ ದೀಪ ಅಳವಡಿಸುತ್ತಿದ್ದಾರೆ. ಅದೇ ರೀತಿ ರಸ್ತೆಗೆ ಹಾಕುವ ಡಿವೈಡರನ್ನ ಕಬ್ಬಿಣದ ಸಲಾಕೆಇಲ್ಲಿ ಹಾಕದೆ ಹಾಗೆಯೇ ಬಿಟ್ಟಿದ್ದಾರೆ. ಮತ್ತು ಪೂರ್ಣ ಪ್ರಮಾಣದ ಫುಟ್ಬಾತ್ ನಿರ್ಮಿಸಿಲ್ಲ. ರಸ್ತೆಯ ಅಂಚಿನಲ್ಲಿ ಹೋಲೊ ಬ್ರಿಕ್ಸ್ ಅಳವಡಿಸಲಿಲ್ಲ. ರಸ್ತೆಯು ವಿಶಾಲವಿದ್ದರೂ. ವೇಗಮಿತಿ ಬೋರ್ಡ್ ಕಾಣುವುದಿಲ್ಲ.. ಈ ಎಲ್ಲಾ ಕಾಮಗಾರಿ ಬಾಕಿ ಉಳಿಸಿಕೊಂಡು ಈಗ ಜನರು ಪ್ರಾಣ ಕಳೆದುಕೊಳ್ಳುವಂತಾಗಿದೆ.
ಈ ಏರಿಯಾ ವನ್ನು ಬ್ಲಾಕ್ ಸ್ಪಾಟ್ ಗುರುತಿಸಬೇಕು. ಎಂದು ಸ್ಥಳೀಯರು ಜಿಲ್ಲಾಡಳಿತವನ್ನೂ ಒತ್ತಾಯಿಸಿದ್ದಾರೆ.
ಮೃತರು ಎಂಐಟಿ ಉದ್ಯೋಗಿಯಾಗಿದ್ದು. ಪತ್ನಿ ಪುತ್ರ ಪುತ್ರಿ ಹಾಗೂ ಅಪಾರ ಬಂಧುಮಿತರನ್ನು ಅಗಲಿದ್ದಾರೆ. ಬಿಜೆಪಿ ಪಕ್ಷದಲ್ಲಿ ತೊಡಗಿಸಿಕೊಂಡಿದ್ದರು