ಉಡುಪಿ, ಆ.21: ಸಮಾಜದಲ್ಲಿ ಅತ್ಯಂತ ಸಂಕಷ್ಟದಲ್ಲಿರುವ ಬಂಧುಗಳಿಗೆ ಕಿಂಚಿತ್ ಆರ್ಥಿಕ ನೆರವು ನೀಡುವ ಸಲುವಾಗಿ ರಚಿಸಲಾದ ’ಸಾಂತ್ವನ ಪರಿಯಾಳ ಬಳಗ’ ಉಡುಪಿ ಇದರ ತ್ರೈವಾರ್ಷಿಕ ಸಭೆಯು ಕೆಮ್ಮಣ್ಣುವಿನ ಹ್ಯಾಂಗ್ ಔಟ್ ರೆಸಾರ್ಟ್‌ನಲ್ಲಿ ಇತ್ತೀಚೆಗೆ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ಸದಾಶಿವ ಬಂಗೇರ ಕುರ್ಕಾಲು ವಹಿಸಿದ್ದರು. ಅಂತ್ಯಕ್ರಿಯೆ, ಬಡಮಕ್ಕಳಿಗೆ ವಿದ್ಯಾಸಹಾಯ, ವೈದ್ಯಕೀಯ ನೆರವು, ವಿಶೇಷ ಚೇತನ ಮಕ್ಕಳ ಪುನರ್ವಸತಿ ಕೇಂದ್ರ, ನಿರಾಶ್ರಿತರ ಆಶ್ರಮಕ್ಕೆ ನೆರವು ಹೀಗೆ ವಿವಿಧ ರೀತಿಯಲ್ಲಿ ಬಳಗದ ವತಿಯಿಂದ ನೆರವೇರಿದ ಸಮಾಜಮುಖಿ ಕೆಲಸ ಕಾರ್ಯಗಳ ವರದಿಯನ್ನು ಸಭೆಗೆ ತಿಳಿಸಲಾಯಿತು.
ಬಳಗದ ಪೋಷಕ ದಿವಾಕರ್ ಸಾಲಿಯಾನ್ ಮಣಿಪಾಲ ಅವರನ್ನು ಸನ್ಮಾನಿಸಲಾಯಿತು. ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯದರ್ಶಿ ಶೇಖರ್ ಸಾಲಿಯಾನ್ ಆದಿ ಉಡುಪಿ ಸ್ವಾಗತಿಸಿದರು. ಸತೀಶ್ ಸುವರ್ಣ ಪಂದುಬೆಟ್ಟು ಪ್ರಾರ್ಥಿಸಿದರು. ಕೋಶಾಧಿಕಾರಿ ಸುಧಾಕರ್ ಸಾಲಿಯಾನ್ ಕಟಪಾಡಿ ಲೆಕ್ಕ ಪತ್ರ ಮಂಡಿಸಿದರು.
ಪೋಷಕರುಗಳಾದ ಭರತ್ ಸುವರ್ಣ ಕನ್ನರ್ಪಾಡಿ, ಪ್ರಮೋದ್ ಬಂಗೇರ ಬೆಳುವಾಯಿ, ಮನೋಜ್ ಸುವರ್ಣಉಡುಪಿ ಉಪಸ್ಥಿತರಿದ್ದರು. ಭರತ್ ಸುವರ್ಣ ನಿಟ್ಟೂರು, ಪ್ರಶಾಂತ್ ಸುವರ್ಣ ಕಟಪಾಡಿ ಸಹಕರಿಸಿದರು. ಪ್ರಶಾಂತ್ ಸಾಲಿಯಾನ್ ನಲ್ಲೂರು ಕಾರ್ಯಕ್ರಮ ನಿರೂಪಿಸಿದರು