ಉಡುಪಿ :ಆಗಸ್ಟ್ 20:17೦ ನೇ ಶ್ರೀ ನಾರಾಯಣ ಗುರುಗಳ ಜಯಂತಿಯನ್ನು ರಾಷ್ಟ್ರೀಯ ಬಿಲ್ಲವ ಈಡಿಗ ನಾಮಧಾರಿ ಧೀವರ ಮಹಾಮಂಡಳಿ (ರಿ)ಉಡುಪಿ ಜಿಲ್ಲೆ ವತಿಯಿಂದ ಉಡುಪಿ ಕೆ ಎಸ್ ಅರ್ ಟಿಸಿ ಬಸ್ ನಿಲ್ದಾಣದ ಬಳಿಯಿರುವ ಸ್ಮರಣಿಕ ಸಭಾಂಗಣದಲ್ಲಿ ಅಚರಿಸಲಾಯಿತು.ಮಂಡಳಿಯ ಜಿಲ್ಲಾಧ್ಯಕ್ಷರಾದ ಚಂದ್ರಹಾಸ ಕಾಪು ದೀಪ ಬೆಳಗಿಸಿ,ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಅವರು ಒಂದೇ ಮತ ಒಂದೇ ಜಾತಿ ಒಂದೇ ಧರ್ಮ ಎನ್ನುವ ನಾರಾಯಣ ಗುರುಗಳ ಸಂದೇಶ ಇಡೀ ಮಾನವ ಕುಲಕ್ಕೆ ನೀಡಿರುವ ಬಹುದೊಡ್ಡ ಕೊಡುಗೆಯಾಗಿದೆ.ಮಾನವೀಯತೆ ಮಲಗಿ ,ಮೂಡ ನಂಬಿಕೆಗಳು ಎದ್ದಿದ್ದ ಕಾಲದಲ್ಲಿ ಮಹಾನ್ ಮಾನವಾತಾವಾದಿಯಾಗಿ ಸಮಾಜದ ಕಣ್ಣರಳಿಸಿದ ದಾರ್ಶನಿಕ ಶ್ರೀ ನಾರಾಯಣಗುರುಗಳು ಎಂದರು.
ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಜ್ಯ ರಾಷ್ಟ್ರೀಯ ಬಿಲ್ಲವ ಈಡಿಗ ನಾಮಧಾರಿ ಧೀವರ ಮಹಾಮಂಡಳಿ (ರಿ) ರಾಜ್ಯ ಉಪಾಧ್ಯಕ್ಷರಾದ ದಿವಾಕರ್ ಸನಿಲ್ ಮಾತನಾಡಿ ಸಮಾನತೆಯ ಹರಿಕಾರ ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ನೀಡಿರುವ ಬ್ರಹ್ಮಶ್ರೀ ನಾರಯಣ ಗುರುಗಳ ಜಯಂತಿಯನ್ನು ಅರ್ಥಪೂರ್ಣವಾಗಿ ಅಚರಿಸಿಕೊಳ್ಳುತ್ತಿದ್ದೇವೆ.ನಾರಾಯಣಗುರುಗಳ ಸಂದೇಶವು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವ ಉದ್ದೇಶದಿಂದ ವಿದ್ಯಾರ್ಥಿಗಳಿಗಾಗಿ ಅನ್ ಲೈನ್ ಭಾಷಣ ಸ್ಪರ್ಧೆಯನ್ನು ಸಂಘಟನೆ ಅಯೋಜಿಸಿದೆ.ಅಷ್ಟೇ ಅಲ್ಲದೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಉಂಟಾದ ಗುಡ್ಡ ಕುಸಿತದಿಂದ ಸಂಕಷ್ಟಕ್ಕೊಳಗಾದ ಸುಮಾರು ಏಳು ಕುಟುಂಬಗಳಿಗೆ ಧನ ಸಹಾಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ನಗರದ ಕೆ ಎಸ್ ಅರ್ ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣ ದಲ್ಲಿ ಸಾರ್ವಜನಿಕರಿಗೆ ಸಿಹಿ ತಿಂಡಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷರಾದ ಚಂದ್ರಶೇಖರ ಕಾಪು ,ರಾಜ್ಯ ಉಪಾಧ್ಯಕ್ಷರಾದ ದಿವಾಕರ್ ಸನಿಲ್.ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕೊಡವೂರು, ಕೋಶಾಧಿಕಾರಿ ಉದಯ ಸನಿಲ್,ಜಯ ಕುಮಾರ್ ಪರ್ಕಳ ,ದಿವಾಕರ್ ಪೂಜಾರಿ ಅಂಬಲಪಾಡಿ,ವಿಶುಕುಮಾರ್ ಕಲ್ಯಾಣಪುರ,ಸಂತೋಷ್ ಬೈರಂಪಳ್ಳಿ ಬಾಲಚಂದ್ರ ಕಿದಿಯೂರು ಬಾಲಕೃಷ್ಣ ಮಲ್ಪೆ.ಕೃಷ್ಣ ಸನಿಲ್,ಅಶ್ವಿನ್ ಕುಮಾರ್ ಮತ್ತಿತ್ತರರು ಉಪಸ್ಥಿತರಿದ್ದರು.