ಕಾರ್ಕಳ :ಆಗಸ್ಟ್ 19 : ಜೇಸೀಸ್ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕುಮಾರಿ ಅಪೂರ್ವ ಮತ್ತು ಶಾಲಾ ಮುಖ್ಯೋಪಾಧ್ಯಾಯನಿ ಸುರೇಖಾ ರಾಜ್ ರವರು ರಕ್ಷಾಬಂಧನದ ಮಹತ್ವ ಮತ್ತು ಪುರಾಣ ಕಥೆಗಳನ್ನು ವಿವರವಾಗಿ ತಿಳಿಸಿದರು. ಅಣ್ಣ-ತಂಗಿಯರು ಆರತಿ ಬೆಳಗಿಸಿ ರಕ್ಷೆಯನ್ನು ಕಟ್ಟಿದರು.
ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಜೇಸಿ ಚಿತ್ತರಂಜನ್ ಶೆಟ್ಟಿ ಯವರು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುರೇಖಾ ರಾಜ್ ರವರು, ಶಾಲಾ ನಾಯಕಿ ನಿರೀಕ್ಷಾ ಹಾಗೂ ಎಲ್ಲಾ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.