ಬ್ರಹ್ಮಾವರ: ಆಗಸ್ಟ್ 18: ವಡ್ಡರ್ಸೆ ಪಂಚಾಯತ್ ನ ಕಾವಡಿ ಗ್ರಾಮದ ನಿವಾಸಿ. ದಿವಂಗತ ಅಣ್ಣಯ್ಯ ಅವರ ಧರ್ಮಪತ್ನಿ.. ಗ್ರಾಮಾಂತರ ಭಾಗದ ಹೆರಿಗೆ ಸ್ಪೆಷಲಿಸ್ಟ್. ಎಂದೇ ಖ್ಯಾತರಾದ ಲಕ್ಷ್ಮೀ ಮರಕಾಲ್ತಿ (88). ವರ್ಷ ವಯಸ್ಸಾಗಿದ್ದು. ಹೃದಯ ಘಾತದಿಂದ ಅಗೋಸ್ಟ್ 14ರ. ಬುಧವಾರ ಸ್ವಗ್ರಹದಲ್ಲಿ ನಿಧನರಾದರು.
ಹಳ್ಳಿ ಕಡೆ ಮನೆಮನೆಗೆ ತೆರಳಿ ಬಾಣಂತಯರಿಗೆ ಹೆರಿಗೆ ಮಾಡಿಸುವ ಕಾಯಕ ಹೊಂದಿದ್ದು. ಸುಮಾರು ಅಂದಾಜು 800 ಕ್ಕೂ ಹೆಚ್ಚು ಹೆರಿಗೆ ಮಾಡಿಸಿ ಖ್ಯಾತಿ ಹೊಂದಿದ್ದರು. ಈ ಕಾಯಕ ವನ್ನು ಉಚಿತ ಸೇವೆಯಾಗಿ ಮಾಡುತ್ತಿದ್ದು. ಸ್ಥಳೀಯವಾಗಿ ಜನಪ್ರಿಯತೆ ಹೊಂದಿದ್ದರು.
ಮೃತರಿಗೆ ಎರಡು ಗಂಡು. ಐದು ಹೆಣ್ಣು ಮಕ್ಕಳನ್ನು. ಹಾಗೂ ಅಪಾರ ಬಂದು ಮಿತ್ರರರನ್ನು ಅಗಲಿದ್ದಾರೆ.