ಮಂಗಳೂರು,ಆಗಸ್ಟ್.18 : 2024-25ನೇ ಶೈಕ್ಷಣಿಕ ಸಾಲಿಗೆ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಆವರಣ, ಘಟಕ ಕಾಲೇಜುಗಳಾದ ವಿಶ್ವವಿದ್ಯಾನಿಲಯ ಕಾಲೇಜು, ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಇಲ್ಲಿಯ ಸ್ನಾತಕೋತ್ತರ ಕಾರ್ಯಕ್ರಮಗಳಿಗೆ ವಿವಿಧ ವಿಷಯಗಳಿಗೆ ಪೂರ್ಣಕಾಲಿಕ/ಅರೆಕಾಲಿಕ ಅತಿಥಿ ಉಪನ್ಯಾಸಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ 55% ಅಂಕ ಪಡೆದಿರುವ ಅಭ್ಯರ್ಥಿಗಳು (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕನಿಷ್ಠ 50% ಅಂಕಗಳೊಂದಿಗೆ) ಅರ್ಜಿ ಸಲ್ಲಿಸಬಹುದು. ಅರ್ಹರು ತಮ್ಮ ಅರ್ಜಿಯನ್ನು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‍ಸೈಟ್ https://www.mangaloreuniversity.ac.in ಮೂಲಕ ಆ.28 ರೊಳಗೆ ಪೂರ್ಣ ದಾಖಲೆಗಳೊಂದಿಗೆ (ಸ್ವಯಂ ದೃಢೀಕೃತ) ಸಲ್ಲಿಸಬೇಕು.
ಆಯ್ಕೆಯಾದ ಅಭ್ಯರ್ಥಿಗಳು ಮಂಗಳೂರು ವಿಶ್ವವಿದ್ಯಾನಿಲಯದ ಯಾವುದೇ ಘಟಕ ಕಾಲೇಜುಗಳಲ್ಲಿ ಸೇವೆ ಸಲ್ಲಿಸಲು ಸಿದ್ಧರಿರಬೇಕು. ಈ ಕುರಿತು ವಿಶ್ವವಿದ್ಯಾನಿಲಯದ ತೀರ್ಮಾನವೇ ಅಂತಿಮವಾಗಿರುತ್ತದೆ.
ಅಭ್ಯರ್ಥಿಗಳು ನಿಗದಿಪಡಿಸಿದ ಅರ್ಜಿ ಶುಲ್ಕ ರೂ. 250/- (SC/ST/Cat-1 ಅಭ್ಯರ್ಥಿಗಳಿಗೆ ರೂ.125/) ನ್ನು ಮಂಗಳೂರು ವಿಶ್ವವಿದ್ಯಾನಿಲಯದ ವೆಬ್‍ಸೈಟ್ https://www.mangaloreuniversity.ac.in ನಲ್ಲಿರುವ ಆನ್‍ಲೈನ್ ಪೇಮೆಂಟ್ ಮೂಲಕ PÀ “005/60-Guest Faculty Application fee” ಎಂಬ ಲೆಕ್ಕಶೀರ್ಷಿಕೆಗೆ ಲಿಂಕ್ ಮುಖಾಂತರ ಪಾವತಿಸಿ e-ಖeಛಿeiಠಿಣ ಅನ್ನು ಅರ್ಜಿಯೊಂದಿಗೆ ತಪ್ಪದೇ ಅಪ್ಲೋಡ್ ಮಾಡಬೇಕು.
ಸಂದರ್ಶನದ ದಿನಾಂಕವನ್ನು ವಿಶ್ವವಿದ್ಯಾನಿಲಯದ ವೆಬ್‍ಸೈಟ್ https://www.mangaloreuniversity.ac.in ನಲ್ಲಿ ಪ್ರಕಟಿಸಲಾಗುವುದು. ನಿಗದಿತ ಶುಲ್ಕ ಪಾವತಿಸದ ಹಾಗೂ ಅಪೂರ್ಣ ದಾಖಲೆಗಳನ್ನು ಅಪ್ಲೋಡ್ ಮಾಡಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅವಶ್ಯಕತೆ ಇದ್ದಲ್ಲಿ ಮಾತ್ರ ಅಗತ್ಯವಿರುವ ಸಂಖ್ಯೆಯ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡುವ ಅಧಿಕಾರವನ್ನು ವಿಶ್ವವಿದ್ಯಾನಿಲಯ ಕಾಯ್ದಿರಿಸಿದೆ ಎಂದು ವಿಶ್ವವಿದ್ಯಾನಿಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.