ನವದೆಹಲಿ :ಆಗಸ್ಟ್ 18:2025 ರಲ್ಲಿ ನಡೆಯಲ್ಲಿರುವ ಅಂಡರ್-19 ಮಹಿಳಾ ವಿಶ್ವಕಪ್‌ನ ಎರಡನೇ ಆವೃತ್ತಿಯ ವೇಳಾಪಟ್ಟಿಯನ್ನು ಐಸಿಸಿ ಇಂದು ಬಿಡುಗಡೆ ಮಾಡಿದೆ. ಇದೇ ಮೊದಲ ಬಾರಿಗೆ ಈ ಟೂರ್ನಿಗೆ ಮಲೇಷ್ಯಾ ಆತಿಥ್ಯ ವಹಿಸಲಿದ್ದು, ವೇಳಾಪಟ್ಟಿಯ ಪ್ರಕಾರ, ಜನವರಿ 18 ರಿಂದ ಫೆಬ್ರವರಿ 2 ರವರೆಗೆ ನಡೆಯಲಿರುವ ಈ ವಿಶ್ವಕಪ್‌ನಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿವೆ.
ಆದರೆ ಪಂದ್ಯಾವಳಿ ಆರಂಭಕ್ಕೂ ಮೊದಲು, ಎಲ್ಲಾ ತಂಡಗಳು ಜನವರಿ 13 ರಿಂದ 16 ರವರೆಗೆ ಅಭ್ಯಾಸ ಪಂದ್ಯಗಳನ್ನು ಆಡಲಿವೆ. ಇನ್ನು ಹಾಲಿ ಚಾಂಪಿಯನ್ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಜನವರಿ 19 ರಂದು ವೆಸ್ಟ್ ಇಂಡೀಸ್ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.
ಮೇಲೆ ಹೇಳಿದಂತೆ ಪಂದ್ಯಾವಳಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸುತ್ತಿದ್ದು, ತಲಾ 4 ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದೆ.