ಉಡುಪಿ :ಆಗಸ್ಟ್, 18: ಹುಲಿವೇಷ ಕಲಾವಿದರಾದ ಅಶೋಕ್‌ರಾಜ್ ಕಾಡಬೆಟ್ಟು ಉಡುಪಿಯ ಲ್ಲಿ ಹುಲಿವೇಷ ತಂಡವನ್ನು ಕಟ್ಟಿದ್ದು 30 ವರ್ಷಗಳ ಸವಿ ನೆನಪಿಗಾಗಿ ಈ ಬಾರಿ ಉಡುಪಿ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಈ ತಂಡದ 40 ಹುಲಿವೇಷ ಧಾರಿಗಳು, 10 ತಾಸೆ, 2 ಡೊಳ್ಳು, 5 ವಾದ್ಯ ಗಳೊಂದಿಗೆ ಅದ್ದೂ ರಿಯಾಗಿ ಹೊರಟು ಶ್ರೀಕೃಷ್ಣ ಲೀಲೋತ್ಸವಕ್ಕೆ ಮೆರುಗು ನೀಡಲು ಸಂಭ್ರಮಿಸಲಿದೆ
ಈ ಬಾರಿಗೆ ಅಶೋಕ್‌ರಾಜ್ ಕಾಡಬೆಟ್ಟು ನಿಧನ ಹೊಂದಿದ ಕಾರಣ, ಅವರ ತಂಡದ ಸಂಪೂರ್ಣ ಜವಾಬ್ದಾರಿ ಅಶೋಕ್‌ರಾಜ್ ಅವರ ಮಕ್ಕಳಾದ ಸುಷ್ಮಾ ರಾಜ್ ಕಾಡಬೆಟ್ಟು ಹಾಗೂ ಪ್ರೀತಿ ರಾಜ್, ಹಾಗು ಸಹೋದರರು ಹಾಗೂ ಅವರ ಗೆಳೆಯರ ಸಹಕಾರದೊಂದಿಗೆ ಅಶೋಕ್‌ರಾಜ್ ಬಳಗ ಮುನ್ನಡೆಯಲಿದೆ.
ಸಾಂಪ್ರದಾಯಿಕ ಕಲೆಯಾಗಿರುವ ಹುಲಿವೇಷವನ್ನು ಉಳಿಸಬೇಕೆಂಬ ತಂದೆಯ ಕನಸು ಮತ್ತು ಅವರ ಹೆಸರನ್ನು ಶಾಶ್ವತವಾಗಿ ಉಳಿಸಬೇಕೆಂಬ ಉದ್ದೇಶದಿಂದ ಅಶೋಕ್‌ರಾಜ್ ಬಳಗಕ್ಕೆ 30 ವರ್ಷ ತುಂಬಿರಿರುವ ಸಂದರ್ಭದಲ್ಲಿ, ಅವರನ್ನು ನೆನಪಿನಲ್ಲಿ ಇಟ್ಟುಕೊಂಡು ತಂಡವನ್ನು ಮುನ್ನಡೆಸಿ ಕೊಂಡು ಹೋಗಲು ನಾವು ಪ್ರಯತ್ನಿಸುತ್ತೇವೆ ಎಂದು ಪುತ್ರಿಯರು ತಿಳಿಸಿದ್ದಾರೆ.
ನಮ್ಮ ತಂಡ 30ರ ಆಸುಪಾಸಿನ ಯುವಕರ ತಂಡವಾಗಿದ್ದು, ಆ. 25ರ ಮಧ್ಯಾಹ್ನ 3 ಗಂಟೆಗೆ ಜಡೆಮೆರವಣಿಗೆಯೊಂದಿಗೆ, ಸಂಜೆ 6 ಗಂಟೆಗೆ ಲೋಭಾನ ಸೇವೆ, ಆಗಸ್ಟ್ 26 ಮತ್ತು 27, ಎರಡು ದಿನ, ಉಡುಪಿಯ ಸುತ್ತಮುತ್ತ ಹುಲಿವೇಷ ಪ್ರದರ್ಶನವನ್ನು ನೀಡಲಿದ್ದಾರೆ.