ಕಾರ್ಕಳ : ಆಗಸ್ಟ್ 14: ಕಾರ್ಕಳ ನಗರದಲ್ಲಿ ಕೆಸರದ ಕಮ್ಮೆನ ಕೆಸರುಡೊಂಜಿ ಆಟಿ ಕೂಟ ಕಾರ್ಯಕ್ರಮವು ಸಾಲ್ಮರದ ಗುರು ದೀಪ್ ಗಾರ್ಡನ್ನಲ್ಲಿ ಕಾರ್ಕಳ ಟೈಗರ್ಸ್ ಪ್ರಶಾಂತ್ ಅಭಿಮಾನಿ ಬಳಗದ ವತಿಯಿಂದ ನಡೆಯಿತು. ಈ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಅಧ್ಯಕ್ಷರು ಮತ್ತು ದಕ್ಷಿಣ ಕನ್ನಡ ಉಡುಪಿ ಉಭಯ ಜಿಲ್ಲೆಗಳ ಕಂಬಳ ಶಿಸ್ತು ಸಮಿತಿಯ ಅಧ್ಯಕ್ಷರುರಾಗಿರುವ ಭಾಸ್ಕರ್ ಕೋಟ್ಯಾನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು,
ತುಳುನಾಡ ಹಿನ್ನೆಲೆ ಹಾಗೂ ಇಂದಿರುವ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡುವಂತಹ ಅಗತ್ಯತೆ ಇದೆ ಜಾತಿ ಭೇದಗಳನ್ನು ಮರೆತು ಹಿಂದೂ ಎನ್ನುವ ಒಂದು ವಾಕ್ಯದಲ್ಲಿ ನಾವೆಲ್ಲ ಕೆಲಸ ಕಾರ್ಯಗಳನ್ನು ಮಾಡಬೇಕಾಗಿದೆ ಎಂದು ಕರ್ನಾಟಕ ತುಳು ಅಕಾಡೆಮಿ ನಿಕಟಪೂರ್ವ ಅಧ್ಯಕ್ಷರಾಗಿರುವಂತಹ ಕತಲ್ ಸರ್ ದಿಕ್ಸೂಚಿ ಭಾಷಣದ ಮೂಲಕ ತಿಳಿಸಿದರು, ಕಾರ್ಯಕ್ರಮದ ಉದ್ದೇಶ ಸ್ಪಷ್ಟವಾಗಿದೆ ಮರೆತು ಹೋಗುವಂತಹ ಅದೆಷ್ಟು ಕಾರ್ಯವೈಕರಿಗಳನ್ನು ನೆನಪಿಸುವಂಥ ಕಾರ್ಯ ನಡೆದಿದೆ ಎಂದು ಚೇತನಾ ಶಾಲಾ ಸಂಚಾಲಕರಾಗಿರುವ ರಘುನಾಥ್ ಶೆಟ್ಟಿಯವರು ತಿಳಿಸಿದರು.
ಕಾರ್ಕಳ ತಾಲೂಕಿನಲ್ಲಿ ತುಳುನಾಡಿನ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವಂತಹ 20 ಸಾಧಕರಿಗೆ ಸನ್ಮಾನಿಸುವಂತಹ ಕಾರ್ಯಕ್ರಮವನ್ನು ಬಹಳ ಪ್ರಶಾಂತ್ ಅವರು ನೆರವೇರಿಸಿದರು. ಸನ್ಮಾನ ಪತ್ರವನ್ನು ಶ್ರೀಮತಿ ರಮಿತಾ ಶೈಲೇಂದ್ರ ವಾಚಿಸಿದರು,
ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವಂತಹ ಕಾರ್ಕಳ ಟೈಗರ್ಸ್ ಸಂಸ್ಥೆಯು ಮೂರು ವಿದ್ಯಾರ್ಥಿಗಳಿಗೆ ಸಹಾಯಧನ ನೀಡುವಂತಹ ಮೂಲಕ ಮಾದರಿ ಕಾರ್ಯಕ್ಕೆ ಸಾಕ್ಷಿಯಾಗಿತ್ತು. ಗದ್ದೆ ಪೂಜೆಯನ್ನು ನೆರವೇರಿಸಿದ ಬಳಿಕ ಬೋಳ ಪ್ರಶಾಂತ್ ಕಾಮತ್ ಅವರು ಕೋಣವನ್ನು ಓಡಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಎಲ್ಲರ ಮೆರಗಿಗೆ ಕಾರಣವಾದದ್ದು. ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜನೆ ಮಾಡುವ ಮೂಲಕ ಸ್ಪರ್ಧೆಯ ಕೊನೆಯಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮ ಹಾಗೂ ಸಮಾರೋಪ ಕಾರ್ಯಕ್ರಮಗಳು ನೆರವೇರಿತು.
ಕಾರ್ಕಳ ಟೈಗರ್ಸ್ ನ ಪ್ರಶಾಂತ ಅಭಿಮಾನಿ ಬಳಗದ ಸದಸ್ಯರಾಗಿರುವಂತಹ ಹರೀಶ್ ಅಮೀನ್ , ಪ್ರದೀಪ್ ಸಿಂಗಾರ್ ಆಚಾರ್ಯ, ಶ್ರೀನಾಥ್ ಆಚಾರ್ಯ, ಅನಂತ ಕೃಷ್ಣಶಣೆ ಶ್ರೀಮತಿ ದಿವ್ಯ ಗಿರಿಶ್ ಅಮೀನ್, ಮತ್ತು ಇಡೀ ಕಾರ್ಯಕ್ರಮದ ಕೇಂದ್ರ ಬಿಂದು ಆಗಿರುವಂತಹ ಗೋಳ ಪ್ರಶಾಂತಕಾ ಮತ್ತು ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರ್ಥನೆಯನ್ನು ಆಧ್ಯ ನಾಯಕ್ ನಿರೂಪಣೆಯನ್ನು ಸತೀಶ್ ಹೊಸ್ಮರ್ ಅವರು ನೆರವೇರಿಸಿದರು.