ಉಡುಪಿ : ಆಗಸ್ಟ್ 14:ಮಲ್ಪೆ ಮೀನುಗಾರರ ಸಂಘದ ವತಿಯಿಂದ ಆ. 19ರಂದು ಸಮುದ್ರಪೂಜೆ ನಡೆಯಲಿದೆ. ಬೆಳಗ್ಗೆ 8ಕ್ಕೆ ವಡಭಾಂಡೇಶ್ವರ ಬಲರಾಮ ದೇವಸ್ಥಾನದಲ್ಲಿ ಪ್ರಾರ್ಥನೆ, ಬಳಿಕ ಮೆರವಣಿಗೆಯೊಂದಿಗೆ ಸಾಗಿ ಸಮುದ್ರತೀರದಲ್ಲಿ ಪೂಜೆ ನಡೆಯಲಿದೆ. ಅಂದು ಬಂದರಿನ ಮೀನುಗಾರಿಕೆ ಚಟುವಟಿಕೆಗಳಿಗೆ ರಜೆ ಸಾರಲಾಗಿದೆ.
ಆ. 1ರಿಂದ ಯಾಂತ್ರಿಕ ಮೀನು ಗಾರಿಕೆ ಆರಂಭಕ್ಕೆ ಅವಕಾಶವಿದ್ದರೂ ಬಿರುಸಾದ ಮಳೆಗಾಳಿಯಿಂದಾಗಿ ಯಾರೂ ಸಮುದ್ರಕ್ಕೆ ಇಳಿದಿರಲಿಲ್ಲ. ಈಗ ಮಳೆಯ ಅಬ್ಬರ ತಗ್ಗಿದ್ದು, ನಾಗಪಂಚಮಿಯಂದು ಬಹುತೇಕ ಆಳಸಮುದ್ರ ಬೋಟುಗಳು ಮೀನುಗಾರಿಕೆಗೆ ತೆರಳಿವೆ.