ಬ್ರಹ್ಮಾವರ: ಆಗಸ್ಟ್ 13:ಸೆಂಟರ್ ಆಫ್ ಇಂಡಿಯಾನ್ ಟ್ರೇಡ್ ಯೂನಿಯನ್ (ಸಿಐಟಿಯು) ಉಡುಪಿ ಜಿಲ್ಲಾ ಸಮಿತಿ ಹಾಗೂ ಸಿಐಟಿಯು ಬ್ರಹ್ಮವರ ವಲಯ ಸಮಿತಿ ನೇತೃತ್ವದಲ್ಲಿ ಬ್ರಹ್ಮವರದ ತುಂಗಾ ನಾರಾಯಣ ಸಂಕೀರ್ಣ ದಲ್ಲಿ ನೂತನ ಗ್ರಂಥಾಲಯವನ್ನು ಅಧಿಕೃತವಾಗಿ ತೆರೆಯಲಾಯಿತು.
ಗ್ರಂಥಾಲಯ ಉದ್ಘಾಟನೆಯನ್ನು ದಿವಂಗತ. ಜಿ.ಭಾಸ್ಕರ ಮಯ್ಯ ರವರ ಧರ್ಮ ಪತ್ನಿ ಶ್ರೀಮತಿ ಕಮಲ ಮಯ್ಯ(ನಿವೃತ್ತ ಶಿಕ್ಷಕಿ) ರಿಬ್ಬನ್ ಕಟ್ ಮಾಡುವುದರ ಮೂಲಕ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ವೈ.ರವೀಂದ್ರ ರಾವ್(ನಿವೃತ್ತ ಪ್ರಾಂಶುಪಾಲರು,ಎಸ್ .ಎಮ್ .ಎಸ್ ಕಾಲೇಜು ಬ್ರಹ್ಮವಾರ. ಜಿ.ಬಾಲಕೃಷ್ಣ ಶೆಟ್ಟಿ ನಿವೃತ್ತ ಪ್ರಾಂಶುಪಾಲರ(ಬಿ.ಡಿ.ಶೆಟ್ಟಿ ಕಾಲೇಜು ಆಫ್ ಬಿಸಿನೆಸ್ ಮ್ಯಾನೆಜ್‌ಮೆಂಟ್ ಮಾಬುಕಾಳ. ಕಾಮ್ರೇಡ್ ವಿಠ್ಠಲ ಪೂಜಾರಿ ಯವರ ಧರ್ಮ ಪತ್ನಿ ಪ್ರೇಮಾ ಉಪಸ್ಥಿತರಿದ್ದರು. ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ರಾದ ಬಾಲಕೃಷ್ಣ ಶೆಟ್ಟಿ ಗಂಥಾಲಯ ಬಗ್ಗೆ ಪ್ರಸ್ತಾವಿಕ ವಾಗಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಶಶಿಧರ ಗೋಲ್ಲ ವಹಿಸಿದ್ದರು. ಕಾರ್ಯಕ್ರಮ ನಿರೂಪಣೆ ಹಾಗೂ ಸ್ವಾಗತವನ್ನು ಸಿಐಟಿಯು ಬ್ರಹ್ಮವರ ವಲಯ ಸಮಿತಿ ಸಹಾಸಂಚಾಲಕಾರಾದ ಸುಭಾಷ್ ನಾಯಕ್ ಮಾಡಿದರು ಬ್ರಹ್ಮವರ ವಲಯ ಸಂಚಾಲಕರಾದ ರಾಮಕಾರ್ಕಡ ಧನ್ಯವಾದ ನೀಡಿದರು
ಸಭೆಯಲ್ಲಿ ಸಿಐಟಿಯು ಉಡುಪಿ ವಲಯ ಸಂಚಾಲಕರಾದ ಕವಿರಾಜ್. ಎಸ್.ಕಾಂಚನ್,ಸದಾಶಿವ ಪೂಜಾರಿ,ಮುರಳಿ,ಸೈಯಾದ್,ಉದಯಪೂಜಾರಿ,ರಮೇಶ್ ಪೂಜಾರಿ,ಶ್ರೀ ಧರಶೆಟ್ಟಿಸುಬ್ರಮಣ್ಯ ಶೆಟ್ಟಿ, ಲಕ್ಷ್ಮಣ ಶೆಟ್ಟಿ ಹಾಗೂ ಜಿ.ಭಾಸ್ಕರ ಮಯ್ಯ ರವರ ಮಗ ಪ್ರಜ್ಞಾನ ವೈಶಂಪಾಯನ ಉಪಸ್ಥಿತರಿದ್ದರು.