ಕಾರ್ಕಳ :ಆಗಸ್ಟ್ 12:ಕಾರ್ಕಳ ತಾಲೂಕಿನ ಮಿಯಾರಿನ ಕುಂಟಿಬೈಲಿನ 38 ವರ್ಷದ ಮಹಿಳೆಗೆ ಮಾರ್ಕ್ ಸೀಮಾ ಎಂಬ ಪೇಸ್ ಬುಕ್ ಖಾತೆಯಲ್ಲಿ ಗೆಳತಿ ಯಾಗಿ ಅವರ ವಿಳಾಸವನ್ನು ಪಡೆದು ಅವರ ನಂಬರಿನಿಂದ ಸುನಿತಾ ಕುಮಾರಿ ಎಂಬವರು ಲಂಡನ್ ನಿಂದ ಚಿನ್ನದ ವಸ್ತು ಮತ್ತು ಪೌಂಡು ಹಣ ಪಾರ್ಸೆಲ್ ಬಂದಿದೆ ಎಂದು ಹೇಳಿ ಅದರ ಕಸ್ಟಮ್ ಚಾರ್ಜ್ ಹಾಗೂ ಐ.ಟಿ ರೈಡ್ ಮಾಡುವುದಾಗಿ ಬೆದರಿಸಿ ಮಹಿಳೆಯಿಂದ ಹಂತ ಹಂತವಾಗಿ ಖಾತೆಗೆ ಹಾಗೂ ಗೂಗಲ್ಪೇ ಮೂಲಕ ಓಟ್ಟು ರೂಪಾಯಿ 11,94,490 ಯನ್ನು ವಂಚನೆ ಮಾಡುವ ಉದ್ದೇಶದಿಂದ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಿರುತ್ತಾರೆ
ಈ ಕುರಿತು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.