ತೆಕ್ಕಟ್ಟೆ: ಆಗಸ್ಟ್ 12: ಕಾರುಗಳೆರಡು ಮುಖಾಮುಖಿ ಢಿಕ್ಕಿಯಾಗಿ ಸಂಪೂರ್ಣ ಜಖಂಗೊಂಡ ಘಟನೆ ಆಗಸ್ಟ್ 11 ರಂದು ಸಂಜೆ ಗಂಟೆ 4.50ರ ಸುಮಾರಿಗೆ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನ್ನಾಡಿಯ ಪ್ರಮುಖ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಹಾಲಾಡಿಯಿಂದ ಕುಂದಾಪುರದ ಕಡೆಗೆ ಸಾಗುತ್ತಿದ್ದ ಟಾಟಾ ಪಂಚ್ ಕಾರಿಗೆ ಎದುರಿನಿಂದ ಅತೀ ವೇಗದಿಂದ ಬಂದ ಹೋಂಡಾ ಕಾರೊಂದು ನೇರವಾಗಿ ಬಂದು ಢಿಕ್ಕಿ ಹೊಡೆದಿದೆ. ಪರಿಣಾಮ ಕಾರುಗಳೆರಡರ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
ಘಟನೆಯ ತೀವ್ರತೆಗೆ ಕಾರಿನ ಏರ್ ಬ್ಯಾಗ್ಗಳು ತೆರೆದಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.