ಬ್ರಹ್ಮಾವರ:ಆಗಸ್ಟ್ 08: ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿ ಯಲ್ಲಿ ಕಾರ್ಯನಿರ್ವ ಹಿಸುವ ಬ್ರಹ್ಮಾವರದ ಕೃಷಿ ಡಿಪ್ಲೋಮ ಮಹಾವಿದ್ಯಾಲಯದ ಪುನರಾರಂಭಕ್ಕೆ ಅಧಿಕೃತ ಪ್ರಕಟಣೆ ಹೊರಡಿಸಲಾಗಿದ್ದು 2024-25 ನೇ ಶೈಕ್ಷಣಿಕ ವರ್ಷದಲ್ಲಿ ಎರಡು ವರ್ಷಗಳ ಕೃಷಿ ಡಿಪ್ಲೊಮಾ ಕೋರ್ಸ್‌ನ ಪ್ರವೇಶಕ್ಕೆ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಯನ್ನು www.uahs.edu.in-ವೆಬ್‌ಸೈಟ್‌ನ ಎಲ್ಲಾ ಅಧಿಸೂಚನೆ ಗಳು ಶೀರ್ಷಿಕೆ ಅಡಿಯಲ್ಲಿ ಡೌನ್‌ಲೋಡ್ ಮಾಡಿ ಭರ್ತಿ ಮಾಡಿದ ಅರ್ಜಿಗಳನ್ನು ಆಗಸ್ಟ್ 29ರೊಳಗೆ ಸಲ್ಲಿಸಬಹುದಾಗಿದೆ. ಎಸೆಸೆಲ್ಸಿ ಪರೀಕ್ಷೆ ಯಲ್ಲಿ ತೇರ್ಗಡೆಯಾದ, 19 ವರ್ಷ ವಯಸ್ಸು ಮೀರದ ಆಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ರೈತರ ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಶೇ.50ರಷ್ಟು ಮೀಸಲಾತಿ ಇರುತ್ತದೆ. ಈ ಎರಡು ವರ್ಷದ ಡಿಪ್ಲೋಮಾ ಕೋರ್ಸ್ ನಲ್ಲಿ ಕೃಷಿ ,ತೋಟಗಾರಿಕೆ, ಪಶುಸಂಗೋಪನೆ,ಮೀನುಗಾರಿಕೆ, ಹೈನುವಿಜ್ಞಾನ, ರೇಷ್ಮೆ ಕೃಷಿ, ಜೇನು,ಕೃಷಿ ಹೀಗೆ ಕೃಷಿಗೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ನುರಿತ ವಿಜ್ಞಾನಿಗಳಿಂದ ಭೋಧನೆ ಇರುತ್ತದೆ. ಅಲ್ಲದೇ ಕೃಷಿ ರಂಗದ ಪ್ರಾಯೋಗಿಕ ಪರಿಚಯ/ಅನುಭವ ಆಧಾರಿತ ಕಲಿಕೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿ ಡಿಪ್ಲೋಮಾ ಕೋರ್ಸ್‌ನ್ನು ಕನ್ನಡ ಮಾಧ್ಯಮದಲ್ಲಿ ನಾಲ್ಕು ಸೆಮಿಸ್ಟರ್ ಪದ್ಧತಿಯಲ್ಲಿ ಬೋಧಿಸಲಾಗುವುದು. ಎಸೆಸೆಲ್ಸಿಯಲ್ಲಿ ಕನ್ನಡ ಪಠ್ಯವನ್ನು ಭಾಷೆಯಾಗಿ ಅಭ್ಯಸಿಸಿ ಕನಿಷ್ಠ ಶೇ.೪೫ ಅಂಕಗಳೊಂದಿಗೆ ಉತ್ತೀರ್ಣ ರಾಗಿರಬೇಕು. ಪ.ಜಾ., ಪ.ಪಂ., ಪ್ರವರ್ಗ ೧ರ ಅಭ್ಯರ್ಥಿಗಳು ಶೇ.೪೦ ಅಂಕ ಪಡೆದಿರಬೇಕು. ಸರಕಾರದ ಆದೇಶಗಳಂತೆ ಸೀಟುಗಳನ್ನು ಭರ್ತಿ ಮಾಡಲಾಗುವುದು ಎಂದು ಪ್ರಕಟಣೆಯ ತಿಳಿಸಲಾಗಿದೆ.