ಉಡುಪಿ:ಆಗಸ್ಟ್ 07:ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಕೈ ಮಗ್ಗ ದಿನಾಚರಣೆಯು ಕರಂಬಳ್ಳಿ ನೇಕಾರರ ಕಾಲನಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಉಡುಪಿ ನಗರ ವ್ಯಾಪ್ತಿಯ ಕರಂಬಳ್ಳಿಯ ಮೂರು ಮಂದಿ ವೃತ್ತಿಪರ ಕೈಮಗ್ಗ ನೇಕಾರ ಮಹಿಳೆಯರಾದ ಸರಸ್ವತಿ ಶೆಟ್ಟಿಗಾರ್, ಸತ್ಯವತಿ ಶೆಟ್ಟಿಗಾರ್ ಮತ್ತು ವಸಂತಿ ಇವರನ್ನು ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಅವರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.
ಬಿಜೆಪಿ ಉಡುಪಿ ನಗರ ಮಂಡಲ ಅಧ್ಯಕ್ಷ ದಿನೇಶ್ ಅಮೀನ್, ಬಿಜೆಪಿ ಜಿಲ್ಲಾ ವಕ್ತಾರೆ ಗೀತಾಂಜಲಿ ಎಮ್. ಸುವರ್ಣ, ಜಿಲ್ಲಾ ಮಹಿಳಾ ಮೋರ್ಚಾ ನಿಕಟಪೂರ್ವ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಉಡುಪಿ ನಗರಸಭಾ ಸದಸ್ಯ ಗಿರಿಧರ್ ಆಚಾರ್ಯ, ಹಿರಿಯರಾದ ರವೀಂದ್ರ ಶೆಟ್ಟಿಗಾರ್, ಬಿಜೆಪಿ ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಿ. ಶೆಟ್ಟಿ, ಕಾರ್ಯದರ್ಶಿ ಕಿಶೋರ್ ಕರಂಬಳ್ಳಿ, ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕಿ ನೀತಾ ಪ್ರಭು, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸುಜಾಲಾ ಸತೀಶ್, ಪ್ರಧಾನ ಕಾರ್ಯದರ್ಶಿ ಅನಿತಾ ಮರವಂತೆ, ಕಾರ್ಯದರ್ಶಿ ನಿರ್ಮಲಾ ಶೆಟ್ಟಿ, ಕೋಶಾಧಿಕಾರಿ ನಾಗವೇಣಿ, ಪ್ರಮುಖರಾದ ಸುಮಾ ಶೆಟ್ಟಿ, ಪವಿತ್ರಾ ಶೆಟ್ಟಿ, ಗೀತಾ ಶೇರಿಗಾರ್, ಲೀಲಾ ಆರ್. ಅಮೀನ್, ಸರೋಜಾ ಶೆಣೈ, ಶಾಂತಿ ಮನೋಜ್, ಸೌರಭಿ ಪೈ, ಶ್ವೇತ, ರಮ್ಯಾ, ಶಾಂತ, ವಿದ್ಯಾ ಶ್ಯಾಮ್ ಸುಂದರ್, ಸುಗುಣಾ ನಾಯ್ಕ್, ಪೂರ್ಣಿಮಾ ಶೆಟ್ಟಿ, ದೀಪ ಪೈ, ಪ್ರಜ್ಞಾ, ಪಾಂಡುರಂಗ ಶೆಟ್ಟಿಗಾರ್, ಪ್ರದೀಪ್ ಕುಮಾರ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಳಿನಿ ಪ್ರದೀಪ್ ರಾವ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.