ಕುಂದಾಪುರ: ಬೆಳಗ್ಗೆ ಮನೆಯಲ್ಲಿದ್ದ ಮಗಳು ಮಾನಸಾ (21) ಅವರು ಸಂಜೆ ತಾಯಿ ಕೆಲಸ ಮುಗಿಸಿ ಬರುವಾಗ ನಾಪತ್ತೆಯಾಗಿರುವುದಾಗಿ ತಾಯಿ ತಲ್ಲೂರಿನ ಮಾಲತಿ ದೂರು ನೀಡಿದ್ದಾರೆ.
ಆ. 5ರ ಬೆಳಗ್ಗೆ ನಾನು ಕುಂದಾಪುರಕ್ಕೆ ಕೆಲಸಕ್ಕೆ ತೆರಳುವಾಗ ಮನೆಯಲ್ಲಿದ್ದು, ಸಂಜೆ 5.45ಕ್ಕೆ ಮನೆಗೆ ವಾಪಸು ಬಂದಾಗ ಇರಲಿಲ್ಲ. ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ನೆರೆಕರೆಯವರಲ್ಲಿ, ಸಂಬಂಧಿಕರಲ್ಲಿ ವಿಚಾರಿಸಿ ಹುಡುಕಾಟ ನಡೆಸಿದರೂ, ಈವರೆಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
ಕನ್ನಡ ಭಾಷೆ ಮಾತನಾಡುವ ಆಕೆ ಕಪ್ಪು ಮೈಬಣ್ಣ, ಮನೆಯಿಂದ ಕಪ್ಪು ಬಣ್ಣದ ಟಿ-ಶರ್ಟ್ ಹಾಗೂ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿ ತೆರಳಿರುವುದಾಗಿದೆ. ಈಕೆಯ ಬಗ್ಗೆ ಏನಾದರೂ ಸುಳಿವು ಸಿಕ್ಕಿದರೆ ಸಮೀಪದ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.
ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ