ನೇಪಾಳ: 07 ಆಗಸ್ಟ್ : ನೇಪಾಳದ ಕಠ್ಮಂಡುವಿನ ವಾಯುವ್ಯ ಪರ್ವತ ಪ್ರದೇಶದಲ್ಲಿ ಬುಧವಾರ ಹೆಲಿಕಾಪ್ಟರ್ ಪತನಗೊಂಡು ಐವರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ‘ಏರ್ ಡೈನಾಸ್ಟಿ ಹೆಲಿಕಾಪ್ಟರ್, 9N-AZD’ ಕಠ್ಮಂಡುವಿನಿಂದ ರಾಸುವಾಗೆ ತೆರಳುತ್ತಿತ್ತು ಮಧ್ಯಾಹ್ನ 1:54 ರ ಹೊತ್ತಿಗೆ ಟೇಕ್ ಆಫ್ ಆದ ಮೂರೇ ನಿಮಿಷಕ್ಕೆ ಹೆಲಿಕಾಪ್ಟರ್ ಸಂಪರ್ಕ ಕಡಿತಗೊಂಡು ನುವಾಕೋಟ್ ಜಿಲ್ಲೆಯ ಸೂರ್ಯ ಚೌರ್ -7 ರಲ್ಲಿ ಗುಡ್ಡ ಪ್ರದೇಶಕ್ಕೆ ಡಿಕ್ಕಿ ಹೊಡೆದು ಪತನಗೊಂಡಿದೆ ಎನ್ನಲಾಗಿದೆ.
ಅಪಘಾತದ ಸ್ಥಳದಿಂದ ನಾಲ್ವರು ಚೀನಾ ಪ್ರಜೆಗಳು ಹಾಗೂ ಪೈಲೆಟ್ ಸೇರಿದಂತೆ ಒಟ್ಟು ಐವರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ.