ಕಾರ್ಕಳ : ಆಗಸ್ಟ್ 07:ಬಾಹುಬಲಿ ಪ್ರವಚನ ಮಂದಿರ, ಕಾರ್ಕಳದಲ್ಲಿ ದಿನಾಂಕ 11-08-2024ನೇ ಆದಿತ್ಯವಾರ ಬೆಳಿಗ್ಗೆ 9.00 ಗಂಟೆಗೆ ಭಜನಾ ಮಂಡಳಿಗಳ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಭಜನಾ ಕಮ್ಮಟ ನಡೆಯಲಿದೆ
ಭಜನಾ ಮಂಡಳಿಗಳ ಒಕ್ಕೂಟ ಕಾರ್ಕಳ ತಾಲೂಕು ಇವರ ನೇತೃತ್ವದಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಪಲಷತ್ ಕಾರ್ಕಳ ಇವರ ಸಹಕಾರದೊಂದಿಗೆ ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟದ ಗೌರವಾಧ್ಯಕ್ಷರಾದ ನಾಡೊಜಾ ಡಾ. ಜಿ ಶಂಕರ್ ಅವರ ಮಾರ್ಗದರ್ಶನದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.