ಕಾರ್ಕಳ : ಆಗಸ್ಟ್ 06:ಪರಶುರಾಮ ಮೂರ್ತಿಯ ಗೊಂದಲ ಬಗ್ಗೆ ಇಂದು ಕಾಂಗ್ರೆಸ್ ಪತ್ರಿಕಾ ಗೋಷ್ಠಿ ನಡೆಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶುಭದ ರಾವ್ ಪರಶುರಾಮರ ಮೂರ್ತಿಯ ಎಲ್ಲಾ ಭಾಗಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ನಿನ್ನೆ ಬಿಜೆಪಿಯವರು ಉಡುಪಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ಮಾಡಿದ್ದಾರೆ. ಆ ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಉದಯ ಕುಮಾರ್ ಶೆಟ್ಟಿಯವರ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಹೇಳಿದರು.
ನಿನ್ನೆ ನವೀನ್ ನಾಯಕ್ ಹಾಗೂ ಮಹಾವೀರ್ ಹೆಗ್ಡೆಯವರು ಉದಯ ಶೆಟ್ಟಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.
ಅಂದು ಸುನಿಲ್ ಕುಮಾರ್ ರವರು ಸಿಮೆಂಟ್ ಪ್ರಕರಣದಲ್ಲಿ ಸಿಕ್ಕಿ ಬಿದ್ದಾಗ ಮಹಾವೀರ್ ಹೆಗ್ಡೆಯವರ ಫೋನ ನ್ನು ಬಿಜೆಪಿಯೇ ಟ್ಯಾಪ್ ಮಾಡಿತ್ತು. ನೀವೇ ಸಿಮೆಂಟ್ ಬಗ್ಗೆ ಮಾಹಿತಿಯನ್ನು ಹೊರಗಡೆ ಹೇಳಿದ್ದು ಎಂಬ ಆರೋಪ ಇತ್ತು. ಇದನ್ನು ನೆನಪಿನಲ್ಲಿಟ್ಟು ರಾಜಕಾರಣ ಮಾಡಿ ಎಂದು ಹೇಳಿದರು.
ಬಿಜೆಪಿ ಅಧ್ಯಕ್ಷ ನವೀನ್ ನಾಯಕ್ ರವರು ಪೊಲೀಸರನ್ನು ನಾಯಿ ಎಂದಿದ್ದಾರೆ. ನವೀನ್ ನಾಯಕ್ ಏನೆಲ್ಲ ಅವ್ಯವಹಾರಗಳಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ನಮ್ಮಲ್ಲೂ ಇದೆ. ಇವರ ಆರ್ಭಟ ಹೀಗೇ ಮುಂದುವರಿದರೆ ನಮಗೂ ಏನು ಮಾಡಬೇಕು ಎಂದು ಗೊತ್ತಿದೆ ಎಂದು ಹೇಳಿದರು.
ಸುನಿಲ್ ಕುಮಾರ್ ರವರು ಬೈಲೂರು ಮಾರಿಯಮ್ಮ ದೇವಸ್ಥಾನಕ್ಕೆ ಬಂದು ಈ ಮೂರ್ತಿ ನಕಲಿ ಅಲ್ಲ ಎಂದು ಹೇಳಲಿ ಎಂದು ಪಂಥಾಹ್ವಾನ ನೀಡಿದರು
ಕಾಂಗ್ರೆಸ್ ಮುಖಂಡರಾದ ಉದಯ ಶೆಟ್ಟಿ ಮಾತನಾಡಿ ಸುನಿಲ್ ಕುಮಾರ್ ರಿಗೆ ಬಕೆಟ್ ಹಿಡಿಯುವವರು ನಮಗೆ ಬೈಯುವ ಪರಿಸ್ಥಿತಿ ಎದುರಾಗಿದೆ.
ಯಾರದೋ ಇನ್ಫ್ಲುಯೆನ್ಸ್ ನಲ್ಲಿ ಬದುಕುವವರು ನನ್ನ ತಂದೆಯವರ ಬಗ್ಗೆ ಹಾಗೂ ನನ್ನ ವೈಯಕ್ತಿಕ ಬದುಕಿನ ಬಗ್ಗೆ ಇಲ್ಲ ಸಲ್ಲದ ಮಾತನ್ನು ಆಡಿದ್ದಾರೆ. ಅವರ ಕೊಳಕು ಮಾತಿಗೆ ನಾವು ಕೊಳಕು ಮಾತನಾಡೋಲ್ಲ ಎಂದರು.
ಸುನಿಲ್ ಕುಮಾರ್ ರಂತಹ ಭ್ರಷ್ಟ ರಾಜಕಾರಣಿ ಇನ್ನೊಮ್ಮೆ ಕರ್ನಾಟಕದಲ್ಲಿ ಹುಟ್ಟಬಾರದು. ಸತತವಾಗಿ ಭ್ರಷ್ಟಾಚಾರದಲ್ಲೇ ತುಂಬಿದ ಈ ವ್ಯಕ್ತಿ ಕಾರ್ಕಳದಲ್ಲಿ ಸುಚೇತ ಶೆಟ್ಟಿ ಬಗ್ಗೆ ರಾಜಕಾರಣ ಮಾಡಿ ಕಾರ್ಕಳದಲ್ಲಿ ದೊಡ್ಡ ಸುಳ್ಳು ಹೇಳುವ ಮೂಲಕ ರಾಜಕಾರಣ ಮಾಡುತ್ತಾರೆ.
ಕೃಷ್ಣ ನಾಯ್ಕ್ ಜಾತಿ ಬಗ್ಗೆ ಮಾತನಾಡುತ್ತಾರೆ. ಇವರಿಗೆ ಜಾತಿ ಬಗ್ಗೆ ಮಾತನಾಡಲು ಪ್ರೇರಣೆ ಕೊಟ್ಟಿದ್ದು ಯಾರು. ಕಾರ್ಕಳದಲ್ಲಿ ಕೂಡ ಜಾತಿ ಜಾತಿ ಮಧ್ಯೆ ಗೊಂದಲ ಮೂಡಿಸಿದ್ದಾರೆ.
ನಾನು ಹಾಕುವ ಬಟ್ಟೆ ಬಗ್ಗೆ ಮಾತನಾಡುವ ಕೀಳು ಮಟ್ಟಕ್ಕೆ ನಿನ್ನೆ ಬಿಜೆಪಿ ಇಳಿದಿದೆ. ಇಂತಹ ಕೊಳಕು ರಾಜಕೀಯಕ್ಕೆ ನಾವು ಇಳಿಯೋದಿಲ್ಲ ಎಂದು ಹೇಳಿದರು.
ನವೀನ್ ನಾಯಕ್ ಪೊಲೀಸ್ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿದ್ದಾರೆ ಇದು ಈ ವ್ಯವಸ್ಥೆಯ ದುರಂತ. ನವೀನ್ ನಾಯಕ್ ತನ್ನ ವ್ಯಕ್ತಿತ್ವ ಯಾವ ರೀತಿಯಲ್ಲಿ ಇದೆ ಎಂದು ಅವಲೋಕನ ಮಾಡಿ ಕೊಳ್ಳಲಿ ಎಂದು ಹೇಳಿದರು
ಸುನಿಲ್ ಕುಮಾರ್ ಗೆ ರಾಜ್ಯದಲ್ಲಿ ಎಲ್ಲೂ ಸೀಟು ಕೊಡದಷ್ಟು ಭ್ರಷ್ಟಾಚಾರ ಮಾಡಿರುವುದು ಅವರ ಹೈ ಕಮಾಂಡ್ ಗು ಗೊತ್ತಿದೆ. ಇದು ಸುನಿಲ್ ಕುಮಾರ್ ಗು ಗೊತ್ತಿದೆ. ಹೀಗಾಗಿ ಅವರು ತನ್ನ ಸೀಟು ಉಳಿಸಿಕೊಳ್ಳಲು ಹರ ಸಾಹಸ ಪಡುತ್ತಿದ್ದಾರೆ.
ಪರಶುರಾಮರ ಮೂರ್ತಿ ಸರಿ ಇದೆ ಎಂದು ದೇವಸ್ಥಾನ ಅಥವಾ ದೈವಸ್ಥಾನಗಳಲ್ಲಿ ಸುನಿಲ್ ಕುಮಾರ್ ಬಂದು ಹೇಳಲಿ. ಅಥವಾ ಪ್ರಮಾಣ ಮಾಡಲಿ ಅದರ ಬಳಿಕ ಕಾಂಗ್ರೆಸ್ ಈ ಬಗ್ಗೆ ಮಾತನಾಡುವುದೇ ಇಲ್ಲ ಎಂದು ಹೇಳಿದರು.
ಪರಶುರಾಮರ ಸೊಂಟದ ಮೇಲ್ಭಾಗ ಕಾಣೆ ಆಯಿತು. ಸೊಂಟದ ಕೆಳ ಭಾಗ ಕಂಚು ಎಂದು ಹೇಳಿದರು. ಆದರೆ ಪೊಲೀಸರು ಬೆಂಗಳೂರುನಲ್ಲಿ ದಾಳಿ ಮಾಡಿದಾಗ ಪುನಃ ಹೊಸ ಕಂಚಿನ ಕಾಲು ಪತ್ತೆ ಆಗಿದೆ. ಹಾಗಾದರೆ ಇವರು ಸೊಂಟದ ಕೆಳಗಿನ ಭಾಗವನ್ನು ಕಂಚು ಎಂದು ಯಾತಕ್ಕಾಗಿ ಹೇಳಿದರು ಎಂಬುದನ್ನು ಜನತೆ ಗಮನಿಸಬೇಕು ಎಂದು ಹೇಳಿದರು.
ನನ್ನ ಮನೆಗೆ ಯಾರೆಲ್ಲ ಹೊಕ್ಕಲು ಹೇಳಿದ್ದರೋ ಅವರೆಲ್ಲ ಬನ್ನಿ. ಆದರೆ ಜನ ಚಪ್ಪಾಳೆ ತಟ್ಟುತ್ತಾರೆ ಎಂದು ಏನೆಲ್ಲ ಹೇಳಬೇಡಿ ಎಂದು ಹೇಳಿದರು.
ವಿಪರೀತ ಸಂಪತ್ತಿನ ಆಸೆ ಇದ್ದವರಿಗೆ ಕೊನೆಗೆ ಅನಾಚಾರವೆ ಆಗೋದು ಎಂದರು,ನಿನ್ನೆ ವಿಕ್ರಂ ಹೆಗ್ಡೆ, ವಿಜಯ ಶೆಟ್ಟಿ ಗಿರೀಶ್ ಶೆಟ್ಟಿ ಮುಂತಾದವರ ಮೇಲೆ ನಾನು ದಾಳಿ ಮಾಡಿಸಿದ್ದೇನೆ ಎಂದಿದ್ದಾರೆ. ಅದನ್ನು ಬಿಜೆಪಿಯವರೇ ಮಾಡಿಸಿದ್ದು ಬೇಕಾದರೆ ಈ ಬಗ್ಗೆ ತನಿಖೆ ಮಾಡಿಸಿ ಸತ್ಯ ತಿಳಿದು ಕೊಳ್ಳಿ ಎಂದು ಹೇಳಿದರು
ಪತ್ರಿಕೆ ಗೋಷ್ಠಿಯಲ್ಲಿ ಬಿಪಿನ್ ಚಂದ್ರ ಪಾಲ್, ಅಜಿತ್ ಹೆಗ್ಡೆ, ತಾರಾನಾಥ್ ಕೋಟ್ಯಾನ್ ವಿವೇಕ್, ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು